ಉಪ್ಪಳ: ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರದ ನೂತನ ಬ್ಯಾಂಡ್ ಮೇಳದ ಪಾಸಿಂಗ್ ಔಟ್ ಸಮಾರಂಭ ಶಾಲೆಯಲ್ಲಿ ಜರುಗಿತು. ಎನ್‍ಸಿಸಿ 32ಕೇರಳ ಬೆಟಾಲಿಯನ್ ಕಮಾಂಡಿಂಗ್ ಅಧಿಕಾರಿ ಕರ್ನಲ್ ಸಜೀಂದ್ರನ್ ಸಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭ ಬ್ಯಾಂಡ್ ಮೇಜರ್ ಸೆರಮೊನಿಯಲ್ ಮೇಸ್‍ನ್ನು ಬ್ಯಾಂಡ್ ಮೇಜರ್ ಗೆ ಹಸ್ತಾಂತರಿಸುವ ಮೂಲಕ ಕರ್ನಲ್ ಸಜೀಂದ್ರನ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬ್ಯಾಂಡ್ ಮಾಸ್ಟರ್ ಕೆ ವಿ ಜಯರಾಮ್ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದರು.
ಸಾಮಾಜಿಕ ಮುಂದಾಳು ಹಮೀದ್ ಕುಞËಲಿ ಪ್ರಶಾಂತಿ ತ್ರೈಮಾಸಿಕ ಸಂಚಿಕೆ ಬಿಡುಗಡೆ ಮಾಡಿದರು. ಪ್ರಶಾಂತಿ ವಿದ್ಯಾ ಕೇಂದ್ರದ ನೂತನ ಡಾಕ್ಯುಮೆಂಟರಿ ಸಾಕ್ಷ್ಯ ಚಿತ್ರವನ್ನು ಬಾಯಾರು ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಸಂಚಾಲಕ ಸಿ ಕೆ ಗೋಪಾಲಕೃಷ್ಣ ಭಟ್ ಬಿಡುಗಡೆಗೊಳಿಸಿದರು. ಶಾಲಾ ಮಾರ್ಗದರ್ಶಕ ಕೃಷ್ಣ ನಾಯಕ್ ಅವರು ಪ್ರಶಾಂತಿ ವಿದ್ಯಾ ಕೇಂದ್ರದ ನೂತನ ಅಂತರ್ಜಾಲ ವನ್ನು ಬಿಡುಗಡೆಗೊಳಿಸಿದರು. ಪ್ರಶಾಂತಿ ಸಏವಾ ಟ್ರಸ್ಟ್ ಕೋಶಾಧಿಕಾರಿ ಎಂ. ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಮ್ಯಾನೇಜಿಂಗ್ ಟ್ರಸ್ಟಿ ಹಿರಣ್ಯ ಮಾಹಾಲಿಂಗ ಭಟ್, ಪ್ರಾಂಶುಪಾಲ ವಾಮನನ್, ನಿಲಯ ಪಾಲಕ ಕೃಷ್ಣ ಪ್ರಸಾದ್ ಶಾಲಾ ಶಿಕ್ಷಕ ವೃಂದ ಮತ್ತು ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆಂಗ್ಲ ಮಾಧ್ಯಮ ಶಿಕ್ಷಕ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


