ಉಪ್ಪಳ: ನವರಾತ್ರಿ ಉತ್ಸವದ ಅಂಗವಾಗಿ ಬಾಯಾರು ಸಮೀಪದ ಆವಳ ಮಠ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀದೇವಿ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ ಅವಳ ಮಠ ಇವರ ಪ್ರಾಯೋಜಕತ್ವದಲ್ಲಿ ರಂಗ ಚೇತನ ಕಲಾ ತಂಡ ಕಾಸರಗೋಡು ಇವರಿಂದ ನೃತ್ಯ ಚಿತ್ತಾರ ಕಾರ್ಯಕ್ರಮ ಜರಗಿತು.
ರಂಗ ಚೇತನ ತಂಡದ ಮೊದಲ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು. ಕಾರ್ಯಕ್ರಮದಲ್ಲಿ ನೃತ್ಯ ಸಂಯೋಜಕÀ ಸದಾಶಿವ ಬಾಲಮಿತ್ರ,, ರಂಗ ಚೇತನ ತಂಡದ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು,ಸದಸ್ಯರಾದ ವಸಂತ ಮಾಸ್ತರ್ ಮೂಡಂಬೈಲ್, ಶಿವ ಮಾಸ್ತರ್ ಚೆರುಗೊಳಿ, ಬಾಲಕೃಷ್ಣ ಗಾಳಿಯಡ್ಕ, ನಿತಿನ್ ಕನಿಲ, ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳು, ಶ್ರೀದೇವಿ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ತಂಡದ ಸದಸ್ಯ ಶಶಿಕುಮಾರ್ ಕುಳೂರು ಕಾರ್ಯಕ್ರಮ ನಿರೂಪಿಸಿದರು.

.jpg)
.jpg)
