ಬದಿಯಡ್ಕ: ಕುಂಬಳೆ ಉಪಜಿಲ್ಲಾ ಶಾಲಾ ವಿಜ್ಞಾನೋತ್ಸವ ಇಂದಿನಿಂದ(ಅ.26) ಅ.28ರ ವರೆಗೆ ಪೆರಡಾಲ ನವಜೀವನ ಶಾಲೆಯಲ್ಲಿ ಜರಗಲಿದೆ. ಬೆಳಗ್ಗೆ 9 ಕೆ ಶಾಲಾ ವ್ಯವಸ್ಥಾಪಕ ಡಾ ಸೂರ್ಯ ಎನ್. ಶಾಸ್ತ್ರಿ ಧ್ವಜಾರೋಹಣಗೈಯ್ಯುವರು. 10 ಕ್ಕೆ ಉದ್ಘಾಟನಾ ಕಾರ್ಯಕ್ರಮ ಜರಗಲಿದೆ. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಲಿರುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಬ್ಲಾಕ್ ಪಂಚಾಯಿತಿ ಅಧ್ಯಕ್ಷರು, ಗ್ರಾಮ ಪಂಚಾಯತಿ ಅಧ್ಯಕ್ಷರುಗಳಾದ ಶಾಂತಾ ಬಿ., ಖಾದರ್ ಬದ್ರಿಯಾ, ಸೊಮಶೇಖರ ಜೆ.ಎಸ್., ಸುಬ್ಬಣ್ಣ ಆಳ್ವ, ಹಮೀದ್ ಆರ್ ಬಿ., ನ್ಯಾಯವಾದಿ ಗೋಪಾಲಕೃಷ್ಣ, ನ್ಯಾಯವಾದಿ, ತಾಹಿರಾ ಯೂಸುಫ್, ಜನಪ್ರತಿನಿಗಳು ಶುಭಾಶಂಸನೆಗೈಯಲಿರುವರು. ಅ.28ರಂದು ಶನಿವಾರ ಸಮಾರೋಪ ಸಮಾರಂಭ ನಡೆಯಲಿದೆ.

