ಚೆನ್ನೈ: ಇಸ್ರೊ ಮುಖ್ಯಸ್ಥ ಎಸ್. ಸೋಮನಾಥ ಅವರು ಭಾರತದ ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಅವರನ್ನು ಸೋಮವಾರ ಭೇಟಿಯಾಗಿದ್ದಾರೆ.
0
samarasasudhi
ಅಕ್ಟೋಬರ್ 16, 2023
ಚೆನ್ನೈ: ಇಸ್ರೊ ಮುಖ್ಯಸ್ಥ ಎಸ್. ಸೋಮನಾಥ ಅವರು ಭಾರತದ ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಅವರನ್ನು ಸೋಮವಾರ ಭೇಟಿಯಾಗಿದ್ದಾರೆ.
ಚೆನ್ನೈನಲ್ಲಿರುವ ಪ್ರಜ್ಞಾನಂದ ಅವರ ಮೆನೆಗೆ ತೆರಳಿದ ಸೋಮನಾಥ ಅವರು, ಜಿಎಸ್‌ಎಲ್‌ವಿ ರಾಕೆಟ್‌ನ ಪ್ರತಿಕೃತಿ ನೀಡಿ ಸಾಧನೆಗೆ ಶುಭ ಕೋರಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮನಾಥ್ ಅವರು, ಪ್ರಜ್ಞಾನಂದ ಅವರ ಸಾಧನೆ ಹೆಮ್ಮೆ ಮೂಡಿಸುವಂಥದ್ದು, ಶೀಘ್ರದಲ್ಲಿ ಜಗತ್ತಿನ ನಂ.1 ಚೆಸ್ ಆಟಗಾರರಾಗಿ ಹೊರಹೊಮ್ಮಲಿ ಎಂದು ಆಶಿಸುತ್ತೇನೆ. ಪ್ರಜ್ಞಾನಂದ ಅವರು ಮುಂಬರುವ ದಿನಗಳಲ್ಲಿ ಭಾರತದಲ್ಲಿ ಬಾಹ್ಯಾಕಾಶವನ್ನು ಉತ್ತೇಜಿಸಲು ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ಕೆಲಸ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.