HEALTH TIPS

ಪಪ್ಪಾಯಿಯನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಈ ಅಡ್ಡಪರಿಣಾಮಗಳಿವೆ

 ನಮ್ಮ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಕೆಲವು ಹಣ್ಣುಗಳನ್ನು ಸೇವಿಸಲೇಬೇಕು ಅದರಲ್ಲೂ ಪಪ್ಪಾಯಿಯಂತಹ ಹಣ್ಣುಗಳು ದೇಹದ ಮೇಲೆ ಬಹಳ ಉತ್ತಮ ಪರಿಣಾಮ ಬೀರುತ್ತವೆ. ತೂಕ ಇಳಿಕೆಯಿಂದ ಹಿಡಿದು ಋತು ಚಕ್ರದ ಸಮಸ್ಯೆ ನಿವಾರಣೆ, ದೇಹದಲ್ಲಿ ಪೋಷಕಾಂಶ ಹೆಚ್ಚಿಸುವುದು ಈ ಎಲ್ಲದಕ್ಕೂ ಪಪ್ಪಾಯಿ ಹಣ್ಣು ಸೇವನೆ ಬಹಳ ಮುಖ್ಯವಾಗಿದೆ.

ಪಪ್ಪಾಯಿ ಹಣ್ಣು ದೇಹದ ರಕ್ಷಣೆಯನ್ನು ಮಾಡುತ್ತದೆ ಪಪ್ಪಾಯಿ ಹಣ್ಣಿನಲ್ಲಿ ಆರೋಗ್ಯಕ್ಕೆ ಬೇಕಾಗಿರುವ, ವಿಟಮಿನ್ ಸಿ, ಎ, ಬಿ, ಕೆ ಮೊದಲಾದ ಪೋಷಕಾಂಶಗಳು ಇವೆ. ಕಡಿಮೆ ಕ್ಯಾಲರಿ ಅಧಿಕ ಪ್ರೋಟೀನ್ ಕಾರ್ಬೋಹೈಡ್ರೇಟ್ಸ್ ಮೊದಲಾದ ಜೀವಸತ್ವಗಳನ್ನು ಕೂಡ ಪಪ್ಪಾಯಿ ಹೊಂದಿದೆ. ಹಾಗಾಗಿ ಬಹುತೇಕ ಎಲ್ಲಾ ವರ್ಗದವರು ಎಲ್ಲಾ ವಯಸ್ಸಿನವರು ಕೂಡ ಪಪ್ಪಾಯಿ ಹಣ್ಣನ್ನು ಸೇವನೆ ಮಾಡಬಹುದು.

ಮಧುಮೇಹ, ಜೀರ್ಣಾಂಗ ರೋಗ, ಕ್ಯಾನ್ಸರ್, ಹೃದ್ರೋಗ ಇಂತಹ ಸಮಸ್ಯೆಗಳಿದ್ದರೂ ಕೂಡ ಪಪ್ಪಾಯಿ ಸೇವನೆ ಮಾಡುವುದು ಒಳ್ಳೆಯದು. ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುವ ಸಾಮರ್ಥ್ಯ ಪಪ್ಪಾಯಿ ಹಣ್ಣಿನಲ್ಲಿ ಇದೆ. ಇಷ್ಟೆಲ್ಲ ಪ್ರಯೋಜನಗಳು ಇದ್ರೂ ಪಪ್ಪಾಯಿ ಹಣ್ಣು ಆರೋಗ್ಯದ ಮೇಲೆ ಅಡ್ಡ ಪರಿಣಾಮವನ್ನು ಬೀರಬಹುದು. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ಸೇವನೆ ಮಾಡುವುದು ಆರೋಗ್ಯಕ್ಕೆ ಬಿಲ್ಕುಲ್ ಒಳ್ಳೆಯದಲ್ಲ. ಪಪ್ಪಾಯಿ ಹಣ್ಣು ಸೇವನೆ ಆರೋಗ್ಯದ ಮೇಲೆ ಯಾವೆಲ್ಲ ಅಡ್ಡ ಪರಿಣಾಮ ಬೀರಬಹುದು ಗೊತ್ತಾ?

ಅತಿಸಾರ ಸಮಸ್ಯೆಗೆ ಕಾರಣವಾಗಬಹುದು ಪಪ್ಪಾಯ ಹಣ್ಣಿನಲ್ಲಿ ಫೈಬರ್ ಅಂಶ ಅಧಿಕವಾಗಿರುತ್ತದೆ ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಸೇವನೆ ಮಾಡಿದರೆ ಅಥವಾ ಪಪ್ಪಾಯ ಹಣ್ಣನ್ನು ಅತಿಯಾಗಿ ಸೇವನೆ ಮಾಡಿದರೆ ಅತಿಸಾರ ಉಂಟಾಗಬಹುದು. ಮಲಬದ್ಧತೆ ಸಮಸ್ಯೆ ಇದ್ದವರು ಪಪ್ಪಾಯಿ ಹಣ್ಣನ್ನು ಸೇವಿಸಿದರೆ ಒಳ್ಳೆಯದು ಆದರೆ ಇದು ಅತಿಯಾಗಿ ಮಲವಿಸರ್ಜನೆ ಆಗುವಂತೆಯೂ ಮಾಡಬಲ್ಲದು ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಸೇವನೆ ಒಳ್ಳೆಯದಲ್ಲ.

ಮಧುಮೇಹದ ಸಮಸ್ಯೆ: ಮದುವೆಯದ ಸಮಸ್ಯೆ ಇರುವವರು ಪಪ್ಪಾಯ ಹಣ್ಣನ್ನು ಸೇವಿಸಬಹುದು ಆದರೆ ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆ ಮಾಡಲು ಔಷಧಿ ಸೇವಿಸುತ್ತಿದ್ದರೆ ಅಂತಹ ಸಮಯದಲ್ಲಿ ಪಪ್ಪಾಯ ಸೇವನೆ ಮಾಡಬಾರದು. ಅದರಲ್ಲೂ ಖಾಲಿ ಹೊಟ್ಟೆಯಲ್ಲಿಯೂ ಕೂಡ ಮದುವೆಗಳು ಪಪ್ಪಾಯಿ ಸೇವನೆ ಮಾಡುವುದು ಒಳ್ಳೆಯದಲ್ಲ.

ಗರ್ಭಿಣಿಯರು ಪಪ್ಪಾಯಿ ತಿಂದ್ರೆ
ಗರ್ಭಿಣಿಯರು ಕೂಡ ಖಾಲಿ ಹೊಟ್ಟೆಯಲ್ಲಿ, ಅತಿಯಾಗಿ ಹಸಿವು ಇದ್ದಾಗ ಪಪ್ಪಾಯಿ ಸೇವನೆ ಮಾಡುವುದು ಒಳ್ಳೆಯದಲ್ಲ. ಪಪ್ಪಾಯಿಯಲ್ಲಿ ಪಾಪೈನ್ ಮತ್ತು ಚೈಮೋಪೈನ್ ಅಂಶಗಳು ಗರ್ಭಾಶಯವನ್ನು ಸಂಕುಚಿತಗೊಳಿಸುತ್ತವೆ ಇದರಿಂದ ಗರ್ಭಪಾತ, ಅಕಾಲಿಕ ಹೆರಿಗೆ ಮೊದಲಾದ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳಬಹುದು.

ಉಸಿರಾಟದ ಸಮಸ್ಯೆ
ತೂಕ ಇಳಿಸಿಕೊಳ್ಳುವುದಕ್ಕಾಗಿ ಬಳಕೆ ಎದ್ದು ಪಪ್ಪಾಯಿ ಹಣ್ಣನ್ನು ತಿನ್ನುವ ಅಭ್ಯಾಸ ಹಲವರಿಗೆ ಇರುತ್ತದೆ ಆದರೆ ಪಪ್ಪಾಯಿಯಲ್ಲಿರುವ ಪಪ್ಪಾಯಿಯಲ್ಲಿರುವ ಪಪಾಯಿ ಪಪೈನ್ ಅಂಶ ಅಲರ್ಜಿಯನ್ನು ಉಂಟು ಮಾಡಬಹುದು ಇದರಿಂದ ಉಸಿರಾಟದ ಸಮಸ್ಯೆ ಕೂಡ ಕಾರಣವಾಗುತ್ತದೆ. ಉಸಿರು ಹಿಡಿದುಕೊಂಡಂತೆ ಅನುಭವ ಆಗುವುದು, ಮೂಗು ಕಟ್ಟುವುದು, ಎದೆಬಡಿತ ಹೆಚ್ಚಾಗುವುದು ಇಂತಹ ಸಮಸ್ಯೆ ಕೂಡ ಪಪ್ಪಾಯಿ ಹಣ್ಣಿನ ಸೇವನೆಯನ್ನು ಖಾಲಿ ಹೊಟ್ಟೆಯಲ್ಲಿ ಮಾಡಿದಾಗ ಉಂಟಾಗಬಹುದು.

ಹೊಟ್ಟೆಯಲ್ಲಿ ಕಿರಿಕಿರಿ ಉಂಟಾಗುವುದು:
ಪಪ್ಪಾಯಿ ಹಣ್ಣು ತಿನ್ನುವುದಕ್ಕೆ ರುಚಿ ಜೊತೆಗೆ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣನ್ನು ತಿಂದಾಗ ಅದು ಜಠರದ ಒಳಗೆ ನೋವು ಅಥವಾ ಕಿರಿಕಿರಿ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಯಾಕಂದರೆ ಪಪ್ಪಾಯಿಯಲ್ಲಿ ಫೈಬರ್, ಕೊಬ್ಬಿನ ಅಂಶ ಅಧಿಕವಾಗಿರುತ್ತದೆ ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಹಸಿವು ನಿವಾರಿಸುವುದಕ್ಕಾಗಿ ಹೆಚ್ಚಿನ ಪ್ರಮಾಣದ ಪಪ್ಪಾಯಿ ಸೇವನೆ ಮಾಡಿದಾಗ ಅದು ಸುಲಭವಾಗಿ ಜೀರ್ಣವಾಗುವುದಿಲ್ಲ.

ಸ್ತನ್ಯಪಾನ ಮಾಡುವ ತಾಯಂದಿರು ಸೇವಿಸದೆ ಇರುವುದು ಒಳ್ಳೆಯದು;
ಪಪ್ಪಾಯಿ ಹಣ್ಣನ್ನು ಗರ್ಭಿಣಿ ಸ್ತ್ರೀಯರು ಹಾಗೂ ಮಗುವಿಗೆ ಹಾಲುಣಿಸುವ ತಾಯಂದಿರು ಕೂಡ ಹೆಚ್ಚಾಗಿ ಸೇವನೆ ಮಾಡುವುದು ಒಳ್ಳೆಯದಲ್ಲ ಅದರಲ್ಲೂ ಖಾಲಿ ಹೊಟ್ಟೆಯಲ್ಲೊಂದು ಪಪ್ಪಾಯಿ ಹಣ್ಣನ್ನು ಸೇವನೆ ಮಾಡಿದರೆ ಅದು ಮಕ್ಕಳ ಮೇಲೆಯೂ ಕೂಡ ಪ್ರತಿಕೂಲ ಪರಿಣಾಮ ಬೀರಬಹುದು ಹಾಗಾಗಿ ಪಪ್ಪಾಯಿ ಹಣ್ಣನ್ನು ಗರ್ಭವಸ್ಥೆಯಲ್ಲಿ ಮತ್ತು ಮಗುವಿಗೆ ಹಾಲುಣಿಸುವ ಸಂದರ್ಭದಲ್ಲಿ ಸೇವನೆ ಮಾಡುವುದಾದರೆ ಮೊದಲು ವೈದ್ಯರನ್ನು ಸಂಪರ್ಕ ಮಾಡಿ.

ಚರ್ಮದಲ್ಲಿ ರಾಶಸ್
ಪಪ್ಪಾಯ ಹಣ್ಣು ಕೆಲವರಿಗೆ ಅಲರ್ಜಿ ಕೂಡ ಹೌದು. ಇದರಲ್ಲಿ ಇರುವ ಪಪೈನ ಕಿಣ್ವ ದೇಹದ ಹೊರಭಾಗದಲ್ಲಿಯೂ ಅಡ್ಡ ಪರಿಣಾಮ ಉಂಟು ಮಾಡಬಹುದು ತುರಿಕೆ ದದ್ದು ಕೆಂಪು ಬಣ್ಣದ ರಾಶಸ್ ಉಂಟಾಗುವುದು ಇಂತಹ ಸಮಸ್ಯೆಗಳನ್ನು ಕೂಡ ಅತಿಯಾದ ಪಪ್ಪಾಯಿ ಸೇವನೆಯಿಂದ ಅನುಭವಿಸಬೇಕಾಗುತ್ತದೆ.

ಮಲಬದ್ಧತೆ ಉಂಟಾಗಬಹುದು:
ಪಪಾಯಿ ಹಣ್ಣಿನಲ್ಲಿ ಕೊಬ್ಬು ಹಾಗೂ ಫೈಬರ್ ಅಂಶ ಅಧಿಕವಾಗಿರುತ್ತದೆ ಇದು ಮಲಬದ್ಧತೆ ಸಮಸ್ಯೆಗೆ ಪರಿಣಾಮಕಾರಿ ಔಷಧವು ಆಗಿದೆ ಇದು ಮಲ ವಿಸರ್ಜನೆ ಸುಲಭವಾಗಿರುವಂತೆ ಮಲ ಮೃದುವಾಗುವಂತೆ ಮಾಡುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣನ್ನು ಜಾಸ್ತಿ ತಿಂದಾಗ ಅದು ಸುಲಭವಾಗಿ ಜೀರ್ಣವಾಗುವುದಿಲ್ಲ ಇದರಿಂದ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ.

ದೇಹದ ಮೇಲೆ ವಿಷಕಾರಿ ಪರಿಣಾಮ ಉಂಟು ಮಾಡಬಹುದು
ಪಪ್ಪಾಯಿ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದಾಗ ಹೊಟ್ಟೆಯಲ್ಲಿ ಇರುವ ಪರಾವಲಂಬಿ ಹುಳಗಳ ಮೇಲೆಯೂ ಪರಿಣಾಮ ಬೀರುತ್ತದೆ ಇದರಿಂದ ಈ ಹೊಟ್ಟೆಯಲ್ಲಿ ಕಿರಿಕಿರಿ ಉಂಟಾಗುವುದು ಅಥವಾ ಫುಡ್ ಪಾಯಿಸನಿಂಗ್ ಆಗುವ ಸಾಧ್ಯತೆ ಇರುತ್ತದೆ.

ಪಪ್ಪಾಯಿ ಹಣ್ಣು ಸಾಕಷ್ಟು ಆರೋಗ್ಯಕರ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಇದರ ಸೇವನೆ ಒಳ್ಳೆಯದೇ ಆದರೆ ನೀವು ದಿನಕ್ಕೆ ಎಷ್ಟು ಸೇವನೆ ಮಾಡಬೇಕು ಅಥವಾ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು ಬೇಡವೋ ಎಂಬುದನ್ನು ತಿಳಿದುಕೊಳ್ಳಬೇಕು. ತಜ್ಞರ ಪ್ರಕಾರ ದಿನಕ್ಕೆ 100 ರಿಂದ 120 ಗ್ರಾಂ ನಷ್ಟು ಪಪ್ಪಾಯಿ ತಿನ್ನಬಹುದು. ಪಪ್ಪಾಯಿ ರಸವನ್ನು ಸೇವನೆ ಮಾಡುವುದಾದರೆ ಆರು ಚಮಚಕ್ಕಿಂತ ಹೆಚ್ಚಿಗೆ ಪಪ್ಪಾಯಿ ರಸ ಸೇವನೆ ಕೂಡ ಒಳ್ಳೆಯದಲ್ಲ. ಇನ್ನು ಪಪ್ಪಾಯಿ ಸೇವನೆಗಿಂತ ಮೊದಲು ಹಾಗೂ ನಂತರ ಸ್ವಲ್ಪವಾದರೂ ಇತರ ಆಹಾರವನ್ನು ಸೇವಿಸಬೇಕು. ಅತಿಯಾದರೆ ಅಮೃತವೂ ವಿಷ ಎನ್ನುವ ಮಾತಿದೆ ಹಾಗಾಗಿ ಪಪ್ಪಾಯಿ ಎಷ್ಟೇ ಆರೋಗ್ಯಕ್ಕೆ ಒಳ್ಳೆಯದಾಗಿದ್ದರು ಕೂಡ ಅದನ್ನು ಒಂದು ಮಿತಿಯಲ್ಲಿ ಮಾತ್ರ ಸೇವಿಸಬೇಕು.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries