ಪೆರ್ಲ: ಪೆರ್ಲ ನಲ್ಕ ಸಮೀಪದ ಶುಳುವಾಲಮೂಲೆ ಶ್ರೀಸದನದಲ್ಲಿ ಶರನ್ನವರಾತ್ರಿ ಮಹೋತ್ಸವ ವಿವಿಧ ವೈದಿಕ, ಸಷಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು. ಬ್ರಹ್ಮಶ್ರೀ ಶಿವಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಪ್ರತಿನಿತ್ಯ ಬೆಳಗ್ಗೆ ಮಹಾಗಣಪತಿ ಹೋಮ, ಸಾಯಂಕಾಲ ಪೂಜೆ, ಸಪ್ತಶತೀ ಪಾರಾಯಣ, ಲಲಿತಾ ಸಹಸ್ರನಾಮಾರ್ಚನೆ, ಕುಂಕುಮಾರ್ಚನೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.
ಅ. 17ರಂದು ಸಂಜೆ 6.30ರಿಂದ ಬದಿಯಡ್ಕ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಶ್ರೀಕೃಷ್ಣ ಲೀಲಾಮೃತ ಯಕ್ಷಗಾನ ಬಯಲಾಟ, 18ರಂದು ಬದಿಯಡ್ಕ ಶ್ರೀ ಶಾರದಾಂಬ ಯಕ್ಷಗಾನ ಕಲಾ ಸಂಘದ "ಭಸ್ಮಾಸುರ ಮೋಹಿನಿ- ಶಬರಿಮಲೆ ಅಯ್ಯಪ್ಪ" ಯಕ್ಷಗಾನ ಬಯಲಾಟ, 19ರಂದು ಸಂಜೆ 5.30ರಿಂದ.ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ "ಶಾಂಭವಿ ವಿಜಯ ರಜತಪರ್ವ" ಸರಣಿ ತಾಳಮದ್ದಳೆ ನಡೆಯಿತು.
ಅ.20ರಂದು ಸಂಜೆ 6ರಿಂದ ಪೆರ್ಲ ಶಿವಾಂಜಲಿ ಕಲಾ ಕೇಂದ್ರದ ವಿದ್ಯಾರ್ಥಿಗಳ "ನೃತ್ಯ ಪಲ್ಲವ" ಭರತನಾಟ್ಯ , ರಾತ್ರಿ 9ರಿಂದ ಕುಂಟಾಲು ಮೂಲೆ ಚಿರಂಜೀವಿ ಯಕ್ಷಗಾನ ಕಲಾಸಂಘದ "ಸುದರ್ಶನ ಶ್ವೇತ ಕುಮಾರ" ಯಕ್ಷಗಾನ ಬಯಲಾಟ, 21ರಂದು ಸಂಜೆ 7ರಿಂದ ಡಾ.ಸತೀಶ್ ಪುಣಿಂಚಿತ್ತಾಯ ಪೆರ್ಲ ಅವರ ಶಿಷ್ಯವೃಂದದಿಂದ ಯಕ್ಷಗಾನಾರ್ಚನೆ, ರಾತ್ರಿ 8ರಿಂದ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ "ಚಕ್ರವ್ಯೂಹ" ಯಕ್ಷಗಾನ ಬಯಲಾಟ, 22ರಂದು ಬೆಳಗ್ಗೆ 10.30ರಿಂದ ಪೆರ್ಲ ಶ್ರೀ ಅಯ್ಯಪ್ಪಸ್ವಾಮೀ ಭಜನಾ ಮಂದಿರದವರಿಂದ ಭಜನೆ, ಸಂಜೆ 6ರಿಂದ ಪುತ್ತೂರು ನೃತ್ಯೋಪಾಸನಾ ಕಲಾಕೇಂದ್ರದ ಸದಸ್ಯರ ನೃತ್ಯೋಹಂ ನಡೆಯಿತು. 23ರಂದು ಬೆಳಗ್ಗೆ 8ರಿಂದ ಚಂಡಿಕಾ ಹವನ ನಡೆಯಿತು. 10.30ರಿಂದ ಪೆರ್ಲ ಶ್ರೀದುರ್ಗಾ ಬಂಟರ ಮಹಿಳಾ ಭಜನ ಮಂಡಳಿಯ ಭಜನೆ, 11.30ಕ್ಕೆ ಪೂರ್ಣಾಹುತಿ, 12.30ಕ್ಕೆ ಮಹಾಪೂಜೆ, ಸಂಜೆ 6ರಿಂದ ವಿದ್ವಾನ್ ಕಾಂಚನ ಎ.ಈಶ್ವರ್ ಭಟ್ಟರ ಶಿಷ್ಯ ಕಾರ್ತಿಕ ಶ್ಯಾಮ ಮುಂಡೋಳುಮೂಲೆ ಅವರಿಂದ ಸಂಗೀತ ಕಚೇರಿ, ರಾತ್ರಿ 8ರಿಂದ ನಾಟ್ಯವಿದುಷಿ ವಾಣಿಶ್ರೀ ವಿ.ಅವರಿಂದ "ನೃತ್ಯಾರ್ಪಣಂ" ಭರತನಾಟ್ಯ, ರಾತ್ರಿ 9.30ರಿಂದ ಮಂಗಳಾರತಿ, ಅಷ್ಟಾವಧಾನ ಸೇವೆ-ಪ್ರಸಾದ ವಿತರಣೆ, 24ರಂದು ವಿಜಯ ದಶಮಿ ಕಾರ್ಯಕ್ರಮಗಳು ನಡೆಯಿತು.


