ಕುಂಬಳೆ: ಬದಿಯಡ್ಕದಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ಐಟಿ ಮೇಳದ ಹೈಸ್ಕೂಲ್ ವಿಭಾಗದ ಎನಿಮೇಶನ್ ಸ್ಪರ್ಧೆಯಲ್ಲಿ ಸೂರಂಬೈಲು ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿಯ ಅನುಸ್ಮಿತ ಪಿ ಎ ‘ಎ’ ಗ್ರೇಡಿನೊಂದಿಗೆ ದ್ವಿತೀಯ ಸ್ಥಾನಗಳಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಈಕೆಯ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.





