HEALTH TIPS

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಪೈವಳಿಕೆ ನಗರ

                     ಉಪ್ಪಳ: ನವಕೇರಳ ನಿರ್ಮಾಣದ ಮುಂದಿನ ಹಂತದ ಪಯಣದ ಅಂಗವಾಗಿ ವಿಧಾನಸಭಾ ಕ್ಷೇತ್ರವಾರು ಮಟ್ಟದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರು ನಡೆಸುತ್ತಿರುವ ನವಕೇರಳ ಸಮಾವೇಶಕ್ಕೆ ಪೈವಳಿಕೆÉ ನಗರ ಸರ್ಕಾರಿ ಪ್ರೌಢಶಾಲೆ ಆವರಣ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನವ ಕೇರಳ ಸಮಾವೇಶದ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜನನಾಯಕರನ್ನು ನೋಡಲು ಜನಸಾಗರವೇ ಪೈವಳಿಕೆ ನಗರದಲ್ಲಿ ನೆರೆದಿತ್ತು. ತುಳುನಾಡಿನ ಪ್ರೀತಿಯನ್ನು ಸಾರುವ ಕೊಂಬಿನ ಸಾಂಪ್ರದಾಯಿಕ ವಾದ್ಯದೊಂದಿಗೆ ಸಚಿವರನ್ನು ವೇದಿಕೆಗೆ ಆಹ್ವಾನಿಸಲಾಯಿತು. ತುಳುನಾಡಿನ ಮುಠ್ಠಾಳೆ ಟೋಪಿ ಮತ್ತು ಕಾಸರಗೋಡಿನ ವಿಶಿಷ್ಟ ಉತ್ಪನ್ನಗಳಿರುವ ಚೀಲವನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸಚಿವರನ್ನು ಸ್ವಾಗತಿಸಲಾಯಿತು. 

              ಮುಖ್ಯಮಂತ್ರಿಗಳು ಕನ್ನಡ ತುಳು ಚಲನಚಿತ್ರ ತಾರೆಯರನ್ನು ಸನ್ಮಾನಿಸಿದರು. ರಾಷ್ಟ್ರಪ್ರಶಸ್ತಿ ವಿಜೇತರಾದ ಸಂತೋಷ ಮಾಡ, ರೂಪಾ ವರ್ಕಾಡಿ ಸೇರಿದಂತೆ ತಾರೆಯರಾದ ಜೆ.ಪಿ.ತೂಮಿನಾಡ್, ರಘು ಭಟ್, ರವಿ ವರ್ಕಾಡಿ, ರಾಜೇಶ್ ಬಂದ್ಯೋಡು, ಪುಷ್ಪಾಕರ ಬೇಕೂರು, ರಾಧಾಕೃಷ್ಣ ಬಾಯಿಕಟ್ಟೆ, ಬಾಲಕೃಷ್ಣ ಮಂಜೇಶ್ವರ, ಅನಿಲ್‍ರಾಜ್ ಉಪ್ಪಳ, ರಮೇಶ್ ಚಂದ್ರ ಕಾಸರಗೋಡು ಅವರು ಮುಖ್ಯಮಂತ್ರಿಗಳಿಂದ ಸನ್ಮಾನ ಸ್ವೀಕರಿಸಿದರು.


                          ನವಕೇರಳ ಸಮಾವೇಶದಲ್ಲಿ ಆಕರ್ಷಣೀಯವಾದ ಸಾಂಸ್ಕøತಿಕ ಸಂಜೆ:

              ಮುಖ್ಯಮಂತ್ರಿ ಮತ್ತು ಸಚಿವರು ಭಾಗವಹಿಸಿದ ನವ ಕೇರಳ ಸಮಾವೇಶದ  ಉದ್ಘಾಟನಾ ಸಮಾರಂಭಕ್ಕೂ ಮುನ್ನ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಇಂಚರ ಮೆಲೋಡೀಸ್ ಮಂಜೇಶ್ವರದ ಮ್ಯೂಸಿಕ್ ಬ್ಯಾಂಡ್ ಸಂಗೀತ ಔತಣದೊಂದಿಗೆ ಪ್ರೇಕ್ಷಕರನ್ನು ಪುಳಕಿತಗೊಳಿಸಿತು. ಮಲಯಾಳಂ, ಕನ್ನಡ, ತಮಿಳು, ತೆಲುಗು, ತುಳು, ಹಿಂದಿ ಮುಂತಾದ ವಿವಿಧ ಭಾಷೆಗಳಲ್ಲಿ ಚಿತ್ರಗೀತೆಗಳು ಮತ್ತು ಜಾನಪದ ಗೀತೆಗಳು ನವ ಕೇರಳ ಸಮಾವೇಶದ ಪ್ರೇಕ್ಷಕರಿಗೆ ಹೃದಯಸ್ಪರ್ಶಿ ಅನುಭವವನ್ನು ನೀಡಿತು. ನವಕೇರಳ ಸಮಾವೇಶದ ಉದ್ಘಾಟನಾ ಸಮಾರಂಭದ ನಂತರ ಮಂಜೇಶ್ವರ ಗ್ರಾಮ ಪಂಚಾಯತಿ ಕುಟುಂಬಶ್ರೀ ಸಿಡಿಎಸ್ ಸದಸ್ಯರಿಂದ ಸಮೂಹ ನೃತ್ಯ, ನಾಟ್ಯನಿಲಯ ಬಾಲಕೃಷ್ಣ ಮಂಜೇಶ್ವರ ಮತ್ತು ತಂಡದಿಂದ ಭರತನಾಟ್ಯ ಹಾಗೂ ಖ್ಯಾತ ಗಾಯಕಿ ಪ್ರಸೀತಾ ಚಾಲಕ್ಕುಡಿ ನೇತೃತ್ವದಲ್ಲಿ ನಾಡನ್ ಪಾಟ್(ಜಾನಪದ ಗೀತೆ) ಪ್ರದರ್ಶನಗೊಂಡಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries