ಉಪ್ಪಳ: ಗಡಿನಾಡ ಸಾಂಸ್ಕ್ರತಿಕ ಅಕಾಡಮಿ(ರಿ)ಕಾಸರಗೋಡು ವತಿಯಿಂದ ಕನ್ನಡ ರಾಜ್ಯೋತ್ಸವ-2023 'ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನ. 19ರಂದು ಬೆಳಗ್ಗೆ 9ಕ್ಕೆ ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಜರುಗಲಿದೆ.
ಬೆಳಗ್ಗೆ 9.30ಕ್ಕೆ ನಡೆಯುವ ಸಾಂಸ್ಕøತಿಕ ಮೆರವಣಿಗೆಯನ್ನು ಡಾ. ಮಲ್ಲಿಕಾರ್ಜುನ ಸಿದ್ದರಾಮಪ್ಪ ನಾಸಿ ಉದ್ಘಾಟಿಸುವರು. ಕನ್ನಡ ರಾಜ್ಯೋತ್ಸವ ಸಮಾರಂಬವನ್ನು ಸಂಸದ, ಕೇಂದ್ರದ ಮಾಜಿ ಸಚಿವ ರಮೇಶ್ ಜಿಗಜಿಣಗಿ ಉದ್ಘಾಟಿಸುವರು. ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸುವರು. ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಈ ಸಂದರ್ಭ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅಬ್ದುಲ್ಲ ಮಾದುಮೂಲೆ ಅವರಿಗೆ ಪೌರಸನ್ಮಾನ ನೀಡಲಾಗುವುದು. ಡಾ. ಸದಾನಂದ ಪೆರ್ಲ ರಾಜ್ಯೋತ್ಸವ ಸಂದೇಶ ನೀಡುವರು.
ಸಾಹಿತಿ ಕೆ.ಕೆ ಗಂಗಾಧರನ್, ಸಮಾಜಸೇವಕ ಎಂ. ಸಂಜೀವ ಶೆಟ್ಟಿ, ಆಯಿಷಾ ಕಾರ್ಕಳ, ಜಾನಪದ ಹಾಡುಗಾರ ಗೋ.ನಾ ಸ್ವಾಮಿ, ದಿವಾಕರ ಬಿ.ಶೆಟ್ಟಿ, ವಕೀಲ ಇಬ್ರಾಹಿಂ ಖಲೀಲ್ ಅರಿಮಲ, ರೂಪಾ ವರ್ಕಾಡಿ, ವಂದನಾ ರೈ ಕಾರ್ಕಳ, ವಾಸು ಬಾಯಾರ್ ಅವರಿಗೆ ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ ಜೆ.ಎಸ್, ಪತ್ರಕರ್ತ ಇಬ್ರಾಹಿಂ ಅಡ್ಕಸ್ಥಳ, ಕೇರಳ ರಾಜ್ಯೋದಯ ಪ್ರಶಸ್ತಿ ಪುರಸ್ಕøತ ಶಂಕರ್ ಸ್ವಾಮಿಕೃಪಾ, ಂದ್ರು ವೆಳ್ಳರಿಕುಂಡು, ಶಶಿಕಲಾ ಪೂಂಜ ಮುಂಬೈ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಗುವುದು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಜಾನಪದ ನೃತ್ಯ, ಸಿಂಗಾರಿ ಮೇಳ, ಯೋಗ ನೃತ್ಯ ಕಾರ್ಯಕ್ರಮ ನಡೆಯುವುದು.





