ಕೊಲ್ಲಂ: ರಾಜ್ಯಮಟ್ಟದ 62ನೇ ರಾಜ್ಯ ಶಾಲಾ ಕಲೋತ್ಸವ ನಿನ್ನೆಯಿಂದ ಕೊಲ್ಲಂನಲ್ಲಿ ಆರಂಭಗೊಂಡಿದ್ದು, ಮೊದಲ ದಿನ ಮುಗಿದಾಗ ವಿದ್ಯಾರ್ಥಿಗಳ ನಡುವೆ ತೀವ್ರ ಪೈಪೋಟಿ ಕಂಡುಬಂದಿದೆ.
ಕೋಝಿಕ್ಕೋಡ್ ಮೊದಲ ದಿನ ಅಂಕಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ. ತ್ರಿಶೂರ್ ಮತ್ತು ಕಣ್ಣೂರು ಎರಡನೇ ಸ್ಥಾನದಲ್ಲಿವೆ.
ಎರಡನೇ ದಿನವಾದ ಇಂದು ವೈವಿಧ್ಯಮಯ ಸ್ಪರ್ಧೆಗಳು ನಡೆಯುತ್ತಿವೆ. ಇಂದು 60 ಸ್ಪರ್ಧೆಗಳು ನಡೆಯುತ್ತಿವೆ. ಮುಖ್ಯ ಸ್ಥಳವಾದ ಆಶ್ರಮ ಮೈದಾನದಲ್ಲಿ ವೇದಿಕೆ ಸ್ಪರ್ಧೆ ಗಮನ ಸೆಳೆದಿವೆ. ಐದು ದಿನಗಳ ಕಲೋತ್ಸವದಲ್ಲಿ 24 ಸ್ಥಳಗಳಲ್ಲಿ ಹೈಸ್ಕೂಲ್ ಮತ್ತು ಹೈಯರ್ ಸೆಕೆಂಡರಿ ವಿಭಾಗಗಳಲ್ಲಿ 239 ಸ್ಪರ್ಧೆಗಳಲ್ಲಿ 14,000 ಪ್ರತಿಭಾವಂತರು ಸ್ಪರ್ಧಿಸಲಿದ್ದಾರೆ.
ಕಲೋತ್ಸವ ಜನವರಿ 8 ರಂದು ಮುಕ್ತಾಯಗೊಳ್ಳಲಿದೆ. ನಟ ಮಮ್ಮುಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಚಿವ ಕೆ.ಎನ್.ಬಾಲಗೋಪಾಲ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಪ್ರತಿಪಕ್ಷದ ನಾಯಕ ವಿ.ಡಿ.ಸತೀಶನ್ ಉದ್ಘಾಟಿಸುವರು. ಸಚಿವ ವಿ.ಶಿವನ್ ಕುಟ್ಟಿ ಪ್ರತಿಭಾವಂತರನ್ನು ಸನ್ಮಾನಿಸಲಿದ್ದಾರೆ.


