ತಿರುವನಂತಪುರಂ; ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಅವರು ಪ್ರಧಾನಿ ಜೊತೆ ವೇದಿಕೆ ಹಂಚಿಕೊಂಡ ನಟಿ ಶೋಭನಾ ವಿರುದ್ಧದ ಕೇಳಿಬರುವ ಟೀಕೆಗಳನ್ನು ತಿರಸ್ಕರಿಸಿರುವÀರು.
ಪ್ರಧಾನ ಮಂತ್ರಿಗಳ ಕಾರ್ಯಕ್ರಮದಲ್ಲಿ ಸಾಂಸ್ಕøತಿಕ ನಾಯಕರು ಭಾಗವಹಿಸುವುದು ಸಹಜ ಎಂದು ಎಂ.ವಿ.ಗೋವಿಂದನ್ ತಿಳಿಸಿದರು.
ಪ್ರಧಾನಿ ಕರೆದಿರುವ ಸಭೆಗೆ ಹಾಜರಾಗಬೇಕೋ ಬೇಡವೋ ಎಂಬುದು ಅವರವರ ವಿಚಾರ. ಕೇರಳದ ಭಾಗವಾಗಿ ಭಾಗವಹಿಸುವುದೂ ತಪ್ಪು ಎಂದು ಹೇಳಬಹುದೇ? ಕನಿಷ್ಠ ಪಕ್ಷ ಕಲಾವಿದರು ಮತ್ತು ಕ್ರೀಡಾ ಕ್ಷೇತ್ರದವರು ಪಕ್ಷ ರಾಜಕಾರಣದ ಚೇಂಬರ್‍ಗಳತ್ತ ತಿರುಗಬಾರದು.
ಅದರಿಂದ ಶೋಭನಾ ಮತ್ತಿತರರನ್ನು ಬಿಜೆಪಿ ಕಣಕ್ಕೆ ಇಳಿಸುವ ಉದ್ದೇಶವರದು. ರಾಜಕೀಯ ಯಾವುದೇ ಇರಲಿ, ಕಲೆ ಮತ್ತು ಕ್ರೀಡಾ ತಾರೆಯರು ಕೇರಳದ ಸಾಮಾನ್ಯ ಆಸ್ತಿ ಎಂದು ಎಂ.ವಿ.ಗೋವಿಂದನ್ ತಿಳಿಸಿರುವರು.
ನಟರನ್ನು ರಾಯಭಾರಿಗಳನ್ನಾಗಿ ಮಾಡಿರುವುದು ಅವರ ರಾಜಕೀಯ ನೋಡಿ ಅಲ್ಲ. ಅವರ ಸಾಮಥ್ರ್ಯವು ಮಾನದಂಡವಾಗಿದೆ. ಶೋಭನಾ ಅವರಂತಹ ನೃತ್ಯಗಾತಿ, ಚಿತ್ರರಂಗದಲ್ಲಿ ಅತ್ಯಂತ ಪ್ರತಿಭಾವಂತ ಕಲಾವಿದೆಯಾಗಿದ್ದು, ಅವರಲ್ಲಿ ಯಾರೂ ಬಿಜೆಪಿ ತೆಕ್ಕೆಗೆ ತರುವ ಯತ್ನಮಾಡಬಾರದೆಂದು ಗೋವಿಂದನ್ ತಿಳಿಸಿರುವರು.


