HEALTH TIPS

ಬ್ಯಾನ್ ಆಗಲಿದ್ಯಾ 100 ರೂ. ಹಳೆ ನೋಟು ?! ಆರ್‌ಬಿಐ ಕೊಟ್ಟ ಸೂಚನೆ ಏನು?

               ವದೆಹಲಿ: 100 ರೂ ಹಳೆ ನೋಟುಗಳು ಬ್ಯಾನ್ ಆಗಲಿದೆ, ಹೀಗಾಗಿ ಆದಷ್ಟು ಬೇಗ ಬ್ಯಾಂಕ್ ಗಳಿಗೆ ನಿಮ್ಮ ಬಳಿ ಇರುವ ಹಳೆ ನೋಟುಗಳನ್ನ ವಾಪಸ್ ಮಾಡಿ ಹೊಸ ನೋಟುಗಳನ್ನ ಪಡೆದುಕೊಳ್ಳಿ ಎಂಬ ಸಂದೇಶ ಒಂದು ವಾಟ್ಸಾಪ್ ಮತ್ತು ಇತರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಜನರನ್ನ ಗೊಂದಲಕ್ಕೀಡು ಮಾಡಿದೆ.ಇದು ನಿಜವೋ ಸುಳ್ಳೋ ಅಂತ ತಿಳಿಯದೇ ಕೆಲವರು ಬ್ಯಾಂಕ್ ಗೆ ಭೇಟಿ ಕೊಟ್ಟವರು ಬಹಳ ಮಂದಿ ಇದ್ದಾರೆ.

            ಇತ್ತೀಚೆಗಷ್ಟೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 /- ಮುಖಬೆಲೆಯ ನೋಟುಗಳನ್ನ ಬ್ಯಾಂಕ್ ಗೆ ಹಿಂದಿರುಗಿಸಿ ಬದಲಿ ಹಣ ಪಡೆದುಕೊಳ್ಳಲು ಸೂಚಿಸಿತ್ತು. ಈ ಹಿಂದೆ 2017ರ ನವೆಂಬರ್ ನಲ್ಲಿ ಕೇಂದ್ರ ಸರ್ಕಾರ ೫೦೦ ಮತ್ತು ೧೦೦೦ ಮುಖಬೆಲೆಯ ನೋಟುಗಳನ್ನ ಅಮ್ಮನ್ಯೀಕರಣಗೊಳಿಸಿ ಆದೇಶ ಹೊರಡಿಸಿತ್ತು. ಆ ಸಂದರ್ಭದಲ್ಲಿ ಇದಕ್ಕೆ ಪರ್ಯಾಯವಾಗಿ ೧೦೦ , ೨೦೦ ಮತ್ತು ೫೦೦ ಹಾಗೂ ಸಾವಿರ ಮುಖಬೆಲೆಯ ಹೊಸ ನೋಟುಗಳನ್ನ ಜಾರಿಗೊಳಿಸಿತ್ತು. ತದನಂತರ 6 ವರ್ಷಗಳ ಬಳಿಕ ಮತ್ತೆ ಕೇಂದ್ರ ಸರ್ಕಾರ ಹಾಗೂ RBI ೨೦೦೦ ರೂಪಾಯಿ ನೋಟುಗಳನ್ನ ಬನ್ ಮಾಡಿತ್ತು.

               ಇದೀಗ ಅದೇ ರೀತಿ ಮತ್ತೆ 100 ರೂಪಾಯಿ ಹಳೆ ನೋಟುಗಳು ಬ್ಯಾನ್ ಆಗಿಲಿದೆ ಎಂಬ ಸುದ್ದಿ ಹರಿದಾಡ್ತಿದೆ. ಆದ್ರೆ ಇದು ನಿಜವಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.ನೂರು ರೂಪಾಯಿ ಹಳೆ ನೋಟ್ ಬ್ಯಾನ್ ಆಗೋದಿಲ್ಲ !ನೂರು ರೂಪಾಯಿ ಮುಖ ಬೆಲೆಯ ಹಳೆನೋಟು ಅಮಾನ್ಯ ಎಂಬ ಸುದ್ದಿ ಹರಿದಾಡಿದ್ದು, ಕೊನೆಗೂ ಈ ಬಗ್ಗೆ RBI ಸ್ಪಷ್ಟನೆ ನೀಡಿದೆ. ಹಾಗಾಗಿ ಜನರಿಗೂ ಕೂಡ ಈ ವಿಚಾರದ ಬಗ್ಗೆ ಗೊಂದಲಗೊಳ್ಳದಂತೆ ಸೂಚನೆ ಸಿಕ್ಕಿದೆ. ನೂರರ ಮುಖಬೆಲೆ ನೋಟು ಮಾರ್ಚ್ 31ರ ವರೆಗೆ ಮಾತ್ರ ಬಳಸಬಹುದು ಆ ನಂತರ ಮತ್ತೆ ಬಳಸಬಾರದು ಎಂದು ಸುಳ್ ಸುದ್ದಿ ಹಬ್ಬಿಸಲಾಗಿತ್ತು.

                ಹೀಗಾಗಿ ಜನರು ತಮ್ಮ ಹಳೆ ನೂರು ರೂಪಾಯಿ ನೋಟು ಹಿಂದಕ್ಕೆ ಹಿಂದಿರುಗಿಸಲು ಬ್ಯಾಂಕಿನ ಮೊರೆ ಹೋಗುವ ಅಗತ್ಯ ಇಲ್ಲ ಎಂದು ಸಹ ಇದೇ ವೇಳೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.ಆ ಮೂಲಕ ನೂರು ರೂಪಾಯಿಯ ಹೊಸ ಮತ್ತು ಹಳೆಯ ಎರಡು ನೋಟುಗಳೂ ಕೂಡ ಚಾಲ್ತಿಯಲ್ಲಿ ಇರಲಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. ಇನ್ನು ಮುಂದೆ ಈ ರೀತಿಯ ಸುದ್ದಿಗಳು ನಿಮ್ಮನ್ನ ತಲುಪಿದರೆ ಗಾಬರಿಯಾಗದೆ, ಸರಿಯಾದ ಮಾಹಿತಿಯನ್ನು ಪಡೆದುಕೊಂಡ ನಂತರವಷ್ಟೇ ಮುಂದುವರೆಯಬೇಕು. ಹಾಗೇನಾದ್ರೂ ಮತ್ತೆ ಯಾವುದಾದ್ರೂ ನೋಟ್ ಬ್ಯಾನ್ ಆದಲ್ಲಿ ಬ್ಯಾಂಕ್ ಅದರ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ ಮತ್ತು ನೋಟುಗಳ ಎಕ್ಸ್ಚೇಂಜ್ ಮಾಡಿಕೊಳ್ಳಲು ಸಾಕಷ್ಟು ಕಾಲವಕಾಶವನ್ನೂ ನೀಡಲಿದೆ.ಒಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಎಲ್ಲಾ ಮಾಹಿತಿಗಳು ನಿಜವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹೀಗಾಗಿ ವಾಟ್ಸಾಪ್ ನಲ್ಲಿ ಬರುವ ತಲೆಬುಡ ಇಲ್ಲದ ತಪ್ಪು ಮಾಹಿತಿಗಳಿಂದ ದೂರವಿರಿ ಮತ್ತು ಇಂಥ ಸಂದೇಶಗಳನ್ನು ಯಾರಿಗೂ ಫಾರ್ವರ್ಡ್ ಮಾಡದಿರಿ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries