HEALTH TIPS

ಮೊದಲ ಚಿತ್ರಗಳನ್ನು ಕಳುಹಿಸಿದ 'ಇನ್ಸಾಟ್‌-3 ಡಿಎಸ್‌'

           ಬೆಂಗಳೂರು: 'ಫೆ. 17ರಂದು ಉಡ್ಡಯನಗೊಂಡಿದ್ದ ಹವಾಮಾನ ಉಪಗ್ರಹ ಇನ್ಸಾಟ್‌-3 ಡಿಎಸ್‌, ಭೂ ಚಿತ್ರಣದ ಕಾರ್ಯಾಚರಣೆಯನ್ನು ಆರಂಭಿಸಿದೆ. ಆನ್‌-ಬೋರ್ಡ್ ಪೇಲೋಡ್‌ಗಳು (6-ಚಾನೆಲ್‌ ಇಮೇಜರ್ ಮತ್ತು 19-ಚಾನೆಲ್ ಸೌಂಡರ್) ಸೆರೆಹಿಡಿದ ಮೊದಲ ಚಿತ್ರಗಳನ್ನು ಬಿಡುಗಡೆ ಮಾಡಿದೆ' ಎಂದು ಇಸ್ರೋ ಸೋಮವಾರ ತಿಳಿಸಿದೆ.

           ಇಮೇಜರ್ ಮತ್ತು ಸೌಂಡರ್ ಪೇಲೋಡ್‌ಗಳು ಇನ್ಸಾಟ್‌-3 ಡಿ ಮತ್ತು ಇನ್ಸಾಟ್‌-3 ಡಿಆರ್‌ನಲ್ಲಿರುವ ಉಪಕರಣಗಳನ್ನೇ ಹೋಲುತ್ತವೆ. ಆದರೆ ರೇಡಿಯೊಮೆಟ್ರಿಕ್ ನಿಖರತೆ, ಕಪ್ಪುಮೇಲ್ಮೈನ ಮಾಪನಾಂಕ ನಿರ್ಣಯ, ಉಷ್ಣ ನಿರ್ವಹಣೆಯಲ್ಲಿ ಗಮನಾರ್ಹ ಸುಧಾರಣೆ ಹೊಂದಿವೆ.

            ಈ ಪೇಲೋಡ್‌ಗಳನ್ನು ಅಹಮದಾಬಾದ್‌ನ ಸ್ಪೇಸ್‌ ಅಪ್ಲಿಕೇಶನ್ಸ್‌ ಸೆಂಟರ್‌ನಲ್ಲಿ( ಎಸ್‌ಎಸಿ) ಅಭಿವೃದ್ಧಿಗೊಳಿಸಿ, ವಿನ್ಯಾಸಗೊಳಿಸಲಾಗಿದೆ.

                ಮೊದಲ ಚಿತ್ರಗಳನ್ನು ಹಾಸನದ ಕೇಂದ್ರದಲ್ಲಿ ಸಂಸ್ಕರಿಸಿ ಬಿಡುಗಡೆ ಮಾಡಲಾಗುವುದು. 6-ಚಾನೆಲ್ ಇಮೇಜರ್ ಉಪಕರಣವು ಭೂಮಿಯ ಮೇಲ್ಮೈ ಮತ್ತು ವಾತಾವರಣದ ಚಿತ್ರಗಳನ್ನು ಸೆರೆಹಿಡಿಯಲಿದೆ. ಮೋಡಗಳು, ನೀರ್ಗಾಳಿ, ಭೂ ಮೇಲ್ಮೈ ತಾಪಮಾನದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಇದು ಸಹಕಾರಿಯಾಗಿದೆ ಎಂದು ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries