ಪೆರ್ಲ: ಅಡ್ಕಸ್ಥಳ ಸಮೀಪದ ಮೊಗೇರು ಶ್ರೀದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಮಾ.15 ರಂದು ಶುಕ್ರವಾರ ಗೌಡಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀಮತ್.ಶಿವಾನಂದ ಸರಸ್ವತಿ ಸ್ವಾಮೀಜಿಯವರ ಆಶೀರ್ವಾದಗಳೊಂದಿಗೆ ವಿವಿಧ ಕಾರ್ಯಕ್ರಮಗಳ ಸಹಿತ ನಡೆಯಲಿದೆ.
ಸಮಾರಂಭದ ಅಂಗವಾಗಿ ಮಾ.14 ರಂದು ಬೆಳಿಗ್ಗೆ 8 ರಿಂದ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ ವಾಚನ, ಮಾತೃಕಪೂಜನ, ದೇವನಾಂದಿ, ಪ್ರಾಕಾರಶುದ್ದಿ, ದ್ವಾದಶ ನಾರೀಕೇಳ ಗಣಪತಿಹವನ, ಸೀಯಾಳಾಭಿಷೇಕ,ಪಂಚಾಮೃತಾಭಿಷೇಕ, ತಂಬಿಲ ಸೇವೆ, ದೈವಗಳ ಆರಾಧನೆ ನಡೆಯಲಿದೆ. ಮಧ್ಯಾಹ್ನ 12 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30 ರಿಂದ ಮೊಗೇರು ಶ್ರೀದುರ್ಗಾಪರಮೇಶ್ವರಿ ಭಜನಾ ಸಮಿತಿಯವರಿಂದ ಭಜನೆ, 7 ರಿಂದ ನಿತ್ಯಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ.
ಶುಕ್ರವಾರ ಬೆಳಿಗಗೆ 7 ರಿಂದ ದೇವತಾ ಪ್ರಾರ್ಥನೆ, ಗಣಪತಿ ಪೂಜನ, ಪುಣ್ಯಾಹವಾಚನ, ನವಕಲಶಾಭಿಷೇಕ, ಚಂಡಿಕಾ ಹವನ ಆರಂಭ, ಮಧ್ಯಾಹ್ನ 12 ರಿಂದ ಚಂಡಿಕಾಹವನದ ಪೂರ್ಣಾಹುತಿ, ಮಹಾಪೂಜೆ, ಪಲ್ಲಕಿ ಉತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ 2.30 ರಿಂದ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಶ್ರೀಕ್ಷೇತ್ರದ ಅಧ್ಯಕ್ಷ ರವೀಂದ್ರನಾಥ ನಾಯಕ್ ಶೇಣಿ ತೋಟದಮನೆ ಅಧ್ಯಕ್ಷತೆ ವಹಿಸುವರು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ ಜೆ.ಎಸ್.ಮುಖ್ಯ ಅತಿಥಿಗಳಾಗಿರುವರು.ತಾರಾನಾಥ ರೈ, ಡಾ.ರಾಮಕೃಷ್ಣ ನಾಯಕ್, ಪೊಸವಳಿಕೆ ಗೋಪಾಲಕೃಷ್ಣ ನಾಯಕ್, ರವೀಂದ್ರನಾಥ ಶರ್ಮ, ನಾರಾಯಣ ನಾಯಕ್ ಎನ್.ಅತಿಥಿಗಳಾಗಿ ಉಪಸ್ಥಿತರಿರುವರು.ಕುಂಡೇರಿ ಜಯಂತ ನಾಯಕ್, ಕರೋಡಿ ಗೋಪಾಲಕೃಷ್ಣ ಬೋರ್ಕರ್, ಸುರೇಂದ್ರ ಬೋರ್ಕರ್ ನನ್ಯ, ಅಜಿತ್ ರಾವ್ ಕಿಲಂಗೋಡಿ ಉಪಸ್ಥಿತರಿರುವರು.
ಸಂಜೆ 5 ರಿಂದ ಮೊಗೇರು ಶ್ರೀದುರ್ಗಾಪರಮೇಶ್ವರಿ ಭಜನಾ ತಂಡದಿಂದ ಭಜನೆ, 6 ರಿಂದ ಸಾಂಸ್ಕøತಿಕ ವೈವಿಧ್ಯಗಳ ಪ್ರದರ್ಶನ, 7.30 ರಿಂದ ನಿತ್ಯಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ.ರಾತ್ರಿ 8 ರಿಂದ ವಿಶೇಷ ಹೂವಿನ ಪೂಜೆ, ರಂಗಪೂಜೆ, ಮಹಾಪೂಜೆ, ಪಲ್ಲಕಿ ಉತ್ಸವ, ವಸಂತಕಟ್ಟೆ ಪೂಜೆ, ಸುಡುಮದ್ದು ಪ್ರದರ್ಶನ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಮಾ.16 ರಂದು ಬೆಳಿಗ್ಗೆ 9 ರಿಂದ ನವಕಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ, ಮಧ್ಯಾಹ್ನ ಅನ್ನಸಂತರ್ಪಣೆಯೊಂದಿಗೆ ಮಹೋತ್ಸವ ಮುಕ್ತಾಯಗೊಳ್ಳಲಿದೆ.




