HEALTH TIPS

ಕಾರ್ಮಾರು ಕ್ಷೇತ್ರದಲ್ಲಿ `ಏಕಾಹ ಭಜನೆ' ಮಂಡಲ ಭಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ: ಭಜನಾ ಕುಟುಂಬ ಸನ್ಮಾರ್ಗದತ್ತ ಸಾಗಲಿದೆ - ಶ್ರೀ ರಾಮಕೃಷ್ಣ ಕಾಟುಕುಕ್ಕೆ

            ಬದಿಯಡ್ಕ: ಭಗವಂತನನ್ನು ಒಲಿಸಿಕೊಳ್ಳಲು ಭಜನೆ ಅತಿಸುಲಭದ ದಾರಿಯಾಗಿದೆ. ಭಜನೆಯಿಂದ ಎಲ್ಲರನ್ನೂ ಒಂದುಗೂಡಿಸಲು ಸಾಧ್ಯವಿದೆ. ಭಜನೆಯಲ್ಲಿ ಜೊತೆಗೂಡಿದ ಕುಟುಂಬಗಳ ಸದಸ್ಯರು ಎಂದೆಂದೂ ಸನ್ಮಾರ್ಗದಲ್ಲಿ ಮುಂದುವರಿಯುವ ವಿಶ್ವಾಸವಿದೆ. ಕುಟುಂಬದೊಂದಿಗೆ ಜೊತೆಗೂಡಿ ಭಗವಂತನ ನಾಮಸ್ಮರಣೆಯನ್ನು ಮಾಡಿದಾಗ ಅಲ್ಲಿ ಒಗ್ಗಟ್ಟು ಮೂಡಿಬರಲಿದೆ ಎಂದು ಮದ್ವಾಧೀಶ ವಿಠಲದಾಸ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಅವರು ಅಭಿಪ್ರಾಯಪಟ್ಟರು.

           ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜರಗುತ್ತಿರುವ ಏಕಾಹ ಭಜನೆ ಮಂಡಲ ಭಜನೋತ್ಸವ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡು ಅವರು ಮಾತನಾಡಿದರು.

         ಬದಿಯಡ್ಕದ ಹಿರಿಯ ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ ದೀಪಬೆಳಗಿಸಿ ಶುಭಹಾರೈಸಿದರು.  ಶ್ರೀರಾಮಚಂದ್ರಾಪುರ ಮಠದ ಮಾತೃತ್ವಂ ಅಧ್ಯಕ್ಷೆ ಈಶ್ವರಿ ಬೇರ್ಕಡವು ಅಧ್ಯಕ್ಷತೆ ವಹಿಸಿ ಮಾತನಾಡಿ, ಓರ್ವ ಮನುಷ್ಯನ ಮನಸ್ಸಿಗೆ ಸುಖಶಾಂತಿ ನೆಮ್ಮದಿಯಿದ್ದರೆ ಮಾತ್ರ ಸುಖನಿದ್ರೆ, ಉತ್ತಮ ಆರೋಗ್ಯಹೊಂದಲು ಸಾಧ್ಯವಿದೆ. ಭಜನೆ, ದೇವಸ್ಥಾನಗಳ ಮೂಲಕ ನಾವು ಅದನ್ನು ಕಂಡುಕೊಳ್ಳಬಹುದು. ನಮ್ಮ ಮೂಲಕ ದೇವರು ಅದೆಷ್ಟೋ ಕಾರ್ಯಗಳನ್ನು ಮಾಡಿಸುತ್ತಾನೆ. ಜೀರ್ಣೋದ್ಧಾರಕಾರ್ಯವೆಂಬ ಅಪೂರ್ವ ಅವಕಾಶವು ಇಂದು ನಮ್ಮ ಪಾಲಿಗೆ ಬಂದೊದಗಿದೆ. ಆತನ ಸೇವೆಯನ್ನು ಮಾಡುವ ಮೂಲಕ ನಾವು ಜೀವನದಲ್ಲಿ ಕೃತಾರ್ಥತೆಯನ್ನು ಹೊಂದಬೇಕು ಎಂದರು. 

    ಡಾ. ಬೇ.ಸೀ.ಗೋಪಾಲಕೃಷ್ಣ  ಭಟ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ನರಸಿಂಹ ಭಟ್ ಕಾರ್ಮಾರು, ಸೇವಾಸಮಿತಿ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಪುದುಕೋಳಿ, ಕಾರ್ಯಾಧ್ಯಕ್ಷ ರಾಮ ಕೆ. ಕಾರ್ಮಾರು, ಶ್ರೀಕ್ಷೇತ್ರದ ಟ್ರಸ್ಟಿ ಗೋಪಾಲ ಭಟ್ ಪಿ.ಎಸ್.ಪಟ್ಟಾಜೆ ಉಪಸ್ಥಿತರಿದ್ದರು.

         ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ಸ್ವಾಗತಿಸಿ, ಯುವಕವೃಂದದ ಅಧ್ಯಕ್ಷ ವಿಜಯಕುಮಾರ್ ಕಾರ್ಮಾರು ವಂದಿಸಿದರು. ಸುಂದರಶೆಟ್ಟಿ ಕೊಲ್ಲಂಗಾನ ನಿರೂಪಿಸಿದರು. ನಂತರ ಕಂಬಾರು ದುರ್ಗಾಪರಮೇಶ್ವರೀ ಭಜನಾ ಸಂಘದವರಿಂದ ಭಜನಾ ಕಾರ್ಯಕ್ರಮ ಜರಗಿತು. ಭಜನಾ ಗುರುಗಳಾದ ರಾಮಕೃಷ್ಣ ಕಾಟುಕುಕ್ಕೆ ಜೊತೆಗೂಡಿ ಹಾಡಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries