HEALTH TIPS

ಗ್ರಾಮಣಿ ಕರ್ತವ್ಯದರ್ಶಿ ಕಾರ್ಯಕ್ರಮ ಸಂಪನ್ನ

                   ಬದಿಯಡ್ಕ:  ಮುಳ್ಳೇರಿಯಾ ಮಂಡಲ ಹವ್ಯಕ ಸಮಿತಿ ನೇತೃತ್ವದಲ್ಲಿ ಗ್ರಾಮಣಿ ಕರ್ತವ್ಯದರ್ಶಿ  ಕಾರ್ಯಕ್ರಮ ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದಲ್ಲಿ  ಸಂಪನ್ನವಾಯಿತು.

                ಈಶ್ವರಿ ಬೇರ್ಕಡವು ದೀಪ ಜ್ವಲನೆಗೈದು ಚಾಲನೆ ನೀಡಿದ ಸಮಾರಂಭದಲ್ಲಿ ಮಂಡಲ ಗುರಿಕ್ಕಾರ ಮೊಗ್ರ ಸತ್ಯನಾರಾಯಣ ಭಟ್  ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.  ಮಂಗಳೂರು ಪ್ರಾಂತ್ಯ ಉಪಾಧ್ಯಕ್ಷರು ಬಾಲ ಸುಬ್ರಹ್ಮಣ್ಯ ಭಟ್ ಸರ್ಪಮಲೆ  ಅಧ್ಯಕ್ಷತೆ ವಹಿಸಿದ್ದರು.  ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಮುಳ್ಳೇರಿಯ ಮಂಡಲ ಅಧ್ಯಕ್ಷ ಕೃಷ್ಣಮೂರ್ತಿ ಮಾಡಾವು , ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಶಾಲಾ ಪ್ರಭಂದಕ ಜಯಪ್ರಕಾಶ ಪಜಿಲ ಶುಭಾಶಂಸನೆಗೈದರು. 


                 ಹವ್ಯಕ ಮಹಾ ಮಂಡಲ ಯುವ ವಿಭಾಗ ಪ್ರಧಾನ ಕೇಶವ ಪ್ರಕಾಶ್ ಯಂ. ಹಾಗೂ ಶ್ರೀ ರಾಮಚಂದ್ರಾಪುರ ಮಠ ತರಬೇತಿ ವಿಭಾಗ ಪ್ರೇರಣಾ ತಂಡದ  ಶ್ರೀಪ್ರಕಾಶ್ ಕುಕ್ಕಿಲ ಹಾಗೂ ಬಾಲಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ಶ್ಯಾಮ ಪ್ರಸಾದ್ ಕುಳಮರ್ವ ಕಾರ್ಯಕ್ರಮ ನಿರೂಪಿಸಿದರು.     

             ಸಮಾರೋಪದಲ್ಲಿ   ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯ ಶಂಕರ್ ಭಟ್ ಮಿತ್ತೂರು ಸಂಘಟನಾತ್ಮಕ ವಿಷಯಗಳನ್ನು ಪ್ರಾಸ್ತಾವಿಸಿದರು. ಡಾ ವೈ ವಿ ಕೃಷ್ಣಮೂರ್ತಿ ಮಾತನಾಡಿದರು. ಉಂಡೆಮನೆ ವಿಶ್ವೇಶ್ವರ ಭಟ್  ವಿವಿವಿ ಬಗ್ಗೆ, ವೇಣುಗೋಪಾಲ ಕೆದ್ಲ ಮಠದ ವಿವಿಧ ಯೋಜನೆ ಬಗ್ಗೆ,  ಶ್ರೀಮಠದ ತಂತ್ರಾಂಶ ಲಕ್ಷ್ಮೀಲಕ್ಷಣದ ಬಗ್ಗೆ ತಂಡದ ಪರವಾಗಿ ಕೇಶವ ಪ್ರಕಾಶ ಮಾಹಿತಿ ನೀಡಿದರು.

         ಒತ್ತಡ ನಿವಾರಣೆ, ಟೀಮ್ ವರ್ಕ್, ಸಮಯ ಹೊಂದಾಣಿಕೆ ಇತರ ವಿಚಾರಗಳ ಬಗ್ಗೆ ಪ್ರೇರಣಾ ತಂಡದವರಿಂದ ಕಾರ್ಯಗಾರ ನಡೆಯಿತು. 68 ಮಂದಿ ಗುರಿಕಾರರು  ಭಾಗವಹಿಸಿದ ಈ ಕಾರ್ಯಾಗಾರದಲ್ಲಿ ಮಂಡಲ, ವಲಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮುಳ್ಳೇರಿಯ ಮಂಡಲ ಸಂಘಟನಾ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಸೇಡಿಗುಮ್ಮೆ  ವಂದಿಸಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries