ಕಾಸರಗೋಡು: ಕೂಡ್ಲು ಪಾಯಿಚ್ಚಾಲ್ ರಸ್ತೆಯಲ್ಲಿ ಪಾದಚಾರಿ ಮಹಿಳೆ ಕತ್ತಿನಿಂದ ಎರಡು ಪವನಿನ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಗಾಂಜಾ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ವಯನಾಡಿನಿಂದ ಬಂಧಿಸಲಾಗಿದೆ. ಕಳನಾಡು ಕೀಯೂರು ನಿವಾಸಿ ಮಹಮ್ಮದ್ ಶಮ್ನಾಸ್(31)ಬಂಧಿತ.
ಮಾ 20ರಂದು ಸ್ಕೂಟರಲ್ಲಿ ಆಗಮಿಸಿದ ಈತ, ಕೂಡ್ಲು ಪಾಯಿಚ್ಚಾಲ್ ರಸ್ತೆ ಬದಿ ನಡೆದುಹೋಗುತ್ತಿದ್ದ ಮಹಿಳೆಯೊಬ್ಬರ ಕತ್ತಿನಿಂದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದನು. ಮಾ. 22ರಂದು ವಯನಾಡಿನಲ್ಲಿ 8ಗ್ರಾಂ ಗಾಂಜಾ ಸಾಗಾಆಟ ಸಂದರ್ಭ ಈತನನ್ನು ಬಂಧಿಸಲಾಗಿದ್ದು, ಸಮಗ್ರ ತಪಾಸಣೆ ನಡೆಸಿದಾಗ ಮಹಿಳೆ ಕತ್ತಿನಿಂದ ಚಿನ್ನದ ಸರ ಎಗರಿಸಿರುವ ಬಗ್ಗೆ ಮಾಹಿತಿ ನೀಡಿದ್ದನು.
ಮಹಿಳೆ ಕಾಸರಗೋಡು ನಗರಠಾಣೆ ಪೊಲೀಸರಿಗೆ ನೀಡಿದ ದೂರಿನನ್ವಯ ಆಸುಪಾಸಿನ ಸಿಸಿ ಕ್ಯಾಮರಾ ದಋಶ್ಯಾವಳಿ ತಪಾಸಣೆ ನಡೆಸಿದ್ದು, ಇದರಲ್ಲಿ ಕಳ್ಳ ಸಂಚರಿಸಿದ ಸ್ಕೂಟರ್‍ನ ದೃಶ್ಯ ಸೆರೆಯಾಗಿತ್ತು. ಜಿಲ್ಲೆಯ ನಾನಾ ಕಡೆ ಸರಣಿ ಕಳವು, ಪಾದಚಾರಿ ಮಹಿಳೆಯರ ಕತ್ತಿನಿಂದ ಸರ ಕಸಿತ ಪ್ರಕರಣಗಳು ಹೆಚ್ಚುತ್ತಿರುವುದು ನಾಗರಿಕರಲ್ಲಿ ಆತಂಕಕ್ಕೂ ಕಾರಣವಾಗಿತ್ತು.


