ತಿರುವನಂತಪುರ: ಇಂದು ಬೆಳಗ್ಗೆ ಆರಂಭವಾದ ಪಡಿತರ ಮಸ್ಟರಿಂಗ್ ಸ್ಥಗಿತಗೊಂಡಿದೆ. ಸರ್ವರ್ ವೈಫಲ್ಯದಿಂದಾಗಿ ಮಸ್ಟರಿಂಗ್ ನಿಲ್ಲಿಸಲಾಗಿದೆ.
ಬಯೋಮೆಟ್ರಿಕ್ ದೃಢೀಕರಣದ ವೈಫಲ್ಯದಿಂದಾಗಿ ಮಸ್ಟರಿಂಗ್ ಅನ್ನು ತಡೆಹಿಡಿಯಲಾಗಿದೆ. ಪ್ರಸ್ತುತ ಸರ್ವರ್ ಬದಲಾಯಿಸದೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಪಡಿತರ ವರ್ತಕರು ಮಾಹಿತಿ ನೀಡಿರುವರು.
ಎಎವೈ (ಹಳದಿ) ಮತ್ತು ಪಿ.ಎಚ್.ಎಚ್(ಗುಲಾಬಿ) ಪಡಿತರ ಚೀಟಿ ಸದಸ್ಯರ ಇ-ಕೆವೈಸಿ ಮಸ್ಟರಿಂಗ್ ಇಂದು ಬೆಳಿಗ್ಗೆಯಿಂದ ಪ್ರಾರಂಭವಾಗಿದೆ. ಆಧಾರ್ ಮಸ್ಟರಿಂಗ್ ನಿಂದಾಗಿ ಇಂದಿನಿಂದ 3 ದಿನಗಳ ಕಾಲ ರಾಜ್ಯದಲ್ಲಿ ಪಡಿತರ ವಿತರಣೆ ಇರುವುದಿಲ್ಲ ಎಂದು ಘೋಷಿಸಲಾಗಿತ್ತು. ಸಾರ್ವಜನಿಕ ಸ್ಥಳಗಳಾದ ಅಂಗನವಾಡಿಗಳು, ಗ್ರಂಥಾಲಯಗಳು ಮತ್ತು ಪಡಿತರ ಅಂಗಡಿಗಳ ಸಮೀಪವಿರುವ ಸಾಂಸ್ಕøತಿಕ ಕೇಂದ್ರಗಳಲ್ಲಿ ಶಿಬಿರಗಳನ್ನು ಆಯೋಜಿಸಲಾಗಿದೆ. ಗ್ರಾಹಕರು ಆಧಾರ್ ಕಾರ್ಡ್ ನೊಂದಿಗೆ ಬರುವಂತೆ ತಿಳಿಸಲಾಗಿದೆ.


