ಕಣ್ಣೂರು: ರೈಲು ಪ್ರಯಾಣಿಕರಿಗೆ ಸಮಾಧಾನವಾಗಿ ಮಂಗಳೂರು-ರಾಮೇಶ್ವರಂ ವಾರದ ಸೇವೆ ಆರಂಭಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಶನಿವಾರ ಸಂಜೆ 7.30ಕ್ಕೆ ಮಂಗಳೂರಿನಿಂದ ಹೊರಡುವ ರೈಲು ಭಾನುವಾರ ಬೆಳಗ್ಗೆ 11.45ಕ್ಕೆ ರಾಮೇಶ್ವರಂ ತಲುಪುತ್ತದೆ.
ಮಂಗಳೂರಿಗೆ ಹಿಂದಿರುಗುವ ಸೇವೆಯನ್ನು ಭಾನುವಾರವೇ ನಡೆಸಲಾಗುವುದು. ಸೋಮವಾರ ಬೆಳಗ್ಗೆ 5.50ಕ್ಕೆ ಮಂಗಳೂರು ತಲುಪಲಿದೆ. ಆದರೆ ಇವೆರಡರ ಸೇವೆ ಆರಂಭದ ದಿನಾಂಕವನ್ನು ರೈಲ್ವೆ ಪ್ರಕಟಿಸಿಲ್ಲ.
ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ಶೋರ್ನೂರು, ಪಾಲಕ್ಕಾಡ್, ಪೆÇಲ್ಲಾಚಿ, ಪಳನಿ, ದಿಂಡಿಗಲ್, ಮಧುರೈ ಮತ್ತು ರಾಮನಾಥಪುರಂ ಸೇರಿದಂತೆ 12 ನಿಲ್ದಾಣಗಳಲ್ಲಿ ಮಂಗಳೂರು-ರಾಮೇಶ್ವರಂ ಸೇವೆ ನಿಲುಗಡೆ ಹೊಂದಿದೆ. 22 ಬೋಗಿಗಳ ರೈಲು ನಾಲ್ಕು ಸಾಮಾನ್ಯ ಬೋಗಿಗಳನ್ನು ಹೊಂದಿದೆ. ಪಳನಿ, ಮಧುರೈ, ಎರ್ವಾಡಿ ಮುಂತಾದ ದೇವಸ್ಥಾನಗಳಿಗೆ ಹೋಗುವ ಭಕ್ತರಿಗೂ ಹೊಸ ಸೇವೆಯಿಂದ ಪ್ರಯೋಜನವಾಗಲಿದೆ.

.webp)
