ಉಪ್ಪಳ: ಕೇಂದ್ರ ಆಡಳಿತ ಚುಕ್ಕಾಣಿಗೆ, 18ನೇ ಲೋಕಸಭೆಗಾಗಿ ಚುನಾವಣೆ ಘೋಷಣೆಯಾಗಿದ್ದು ನೀತಿ ಸಂಹಿತೆ ಜಾರಿಯಲ್ಲಿದೆ. ಈ ಮಧ್ಯೆ ಪೈವಳಿಕೆ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ರಾಜಕೀಯ ನೇತಾರರ ಚಿತ್ರಗಳು ರಾರಾಜಿಸುತ್ತಿದ್ದು ಚುನಾವಣಾ ಆಯೋಗ ಏನು ಕ್ರಮ ಕೈಗೊಳ್ಳಲಿದೆ ಎಂಬ ಕುತೂಹಲ ಸಾರ್ವಜನಿಕರದ್ದು.
ಪೈವಳಿಕೆ ನಗರದ ಬಸ್ ನಿಲ್ದಾಣದಲ್ಲಿ ಎಡರಂಗದ ನೇತಾರರ ಚಿತ್ರಗಳನ್ನು ತೆರವು ಮಾಡದಿರುವುದು ಕಂಡುಬಂದಿದ್ದು, ಖಂಡನೀಯ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಆರೋಪಿಸಿದ್ದಾರೆ. ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸ್ಪಂದಿಸದ ಅಧಿಕಾರಿಗಳ ಓಲೈಕೆ ಮುಂದುವರಿದರೆ ಬಿಜೆಪಿ ಉನ್ನತಮಟ್ಟದ ಕ್ರಮ ಕೈಗೊಳ್ಳಲಿದೆ ಎಂದು ಮಂಡಲಾಧ್ಯಕ್ಷ ಆದರ್ಶ ಬಿ.ಎಂ.ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


