ತಿರುವನಂತಪುರಂ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪುತ್ರಿ ವೀಣಾ ಅವರ ಮಾಸಿಕ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕೊಚ್ಚಿಯಲ್ಲಿ ಸಿಎಂಆರ್‍ಎಲ್ ಅಧಿಕಾರಿಗಳನ್ನು ವಿಚಾರಣೆ ಮುಂದುವರಿಸಿತು.
ಕಂಪನಿಯ ಸಿಎಫ್‍ಒ ಸುರೇಶ್ ಕುಮಾರ್, ಹಿರಿಯ ವ್ಯವಸ್ಥಾಪಕ ಚಂದ್ರಶೇಖರನ್ ಮತ್ತು ಸಿಸ್ಟಮ್‍ಗಳ ಉಸ್ತುವಾರಿ ಹೊತ್ತಿರುವ ಐದು ಮಂದಿಯನ್ನು ವಿಚಾರಣೆಗೆ ಕರೆಯಲಾಗಿತ್ತು.
ನಿನ್ನೆ ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಕೊಚ್ಚಿ ಇಡಿ ಕಚೇರಿಗೆ ಹಾಜರಾದ ಅಧಿಕಾರಿಗಳ ವಿಚಾರಣೆ ಮಧ್ಯಾಹ್ನದ ವೇಳೆಗೆ ಆರಂಭವಾಗಿದೆ. ತಡರಾತ್ರಿಯವರೆಗೆ ಮತ್ತು ಬೆಳಗಿನ ಜಾವದವರೆಗೂ ವಿಚಾರಣೆ ಮುಂದುವರಿಯಿತು. ಸಿಎಂಆರ್‍ಎಲ್ ವ್ಯವಸ್ಥಾಪಕ ನಿರ್ದೇಶಕ ಶಶಿಧರನ್ ಕರ್ತಾ ನಿನ್ನೆ ಹಾಜರಾಗಿರಲಿಲ್ಲ. ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಬರಲಾಗಿಲ್ಲ ಎಂದು ಉತ್ತರ ನೀಡಲಾಗಿರುವುದಾಗಿ ವರದಿಯಾಗಿದೆ.





