ಕುಂಬಳೆ: ಐದು ದಿನಗಳ ಕಾಲ ಪುತ್ತಿಗೆ ಮುಹಿಮ್ಮತ್‍ನಲ್ಲಿ ನಡೆದ ಸೈಯದ್ ತ್ವಾಹಿರುಲ್ ಅಹದಲ್ ತಂಗಳ್ ಅವರ 19ನೇ ವರ್ಷದ ಉರುಸ್ ಮುಬಾರಕ್ ಆಧ್ಯಾತ್ಮಿಕ ಸಂಗಮದೊಂದಿಗೆ ಭಾನುವಾರ ಸಮಾರೋಪಗೊಂಡಿತು. ಉರುಸ್ ಅಂಗವಾಗಿ ಸಾವಿರಾರು ಮಂದಿಗೆ ತುಪ್ಪದ ಅನ್ನದ ವಿತರಣೆ ನಡೆಯಿತು. ಜ್ಞಾನಸಂಗಮ, ಆಧ್ಯಾತ್ಮಿಕ, ಸಾಂಸ್ಕøತಿಕ ಕಾರ್ಯಕ್ರಮ, ಪದವಿಪ್ರದಾನ ಸಮಾರಂಭದೊಂದಿಗೆ ನಡೆದ ಉರುಸ್ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ಪಾಲ್ಗೊಂಡಿದ್ದರು.
ಸಮಾರೋಪ ಸಮಾರಂಭದಲ್ಲಿ ಸಮಸ್ತ ಕೇಂದ್ರ ಮುಶಾವರ ಉಪಾಧ್ಯಕ್ಷ ಖುದ್ವತ್ತುಸ್ಸಾದತ್ ಸೈಯದ್ ಕೆ.ಎಸ್.ಅಟ್ಟಕೋಯ ತಙಳ್ ಕುಂಬೋಳ್ ಉದ್ಘಾಟಿಸಿದರು. ಸೈಯದ್ ಹಸನುಲ್ ಅಹ್ದಲ್ ಪ್ರಾರ್ಥನೆ ನೆರವೇರಿಸಿದರು. ಮುಹಿಮ್ಮತ್ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಅಬ್ದುಲ್ಲಕುಞÂ ಫೈಝಿ ಅಧ್ಯಕ್ಷತೆ ವಹಿಸಿದ್ದರು. ಪಟ್ಟುವಂ ಕೆ.ಪಿ.ಅಬೂಬಕರ್ ಮುಸ್ಲಿಯಾರ್, ಸಿಮುಹಮ್ಮದ್ ಫೈಝಿ ಮುಖ್ಯ ಭಾಷಣ ಮಾಡಿದರು. ಸೈಯದ್ ಇಬ್ರಾಹಿಂ ಪೂಕುಞÂ ತಙಳ್ ಕಲ್ಲಕಟ್ಟ, ಸೈಯದ್ ಪಿ.ಎಸ್.ಅಟ್ಟಕೋಯ ತಙಳ್ ಪಂಜಿಕಲ್, ಸೈಯದ್ ಮುನೀರ್ ಅಹ್ದಲ್ ತಙಳ್, ಸಯ್ಯದ್ ಹಬೀಬ್ ಅಹ್ದಲ್ ತಙಳ್, ಸಯ್ಯದ್ ಹಮೀದ್ ಅನ್ವರ್ ಅಹ್ದಲ್ ತಙಲ್, ಸೈಯದ್ ಅಬ್ದುಲ್‍ಕರೀಂ ಅಲ್‍ಹಾದಿ ಮೊದಲಾದವರು ಉಪಸ್ಥಿತರಿದ್ದರು. ಮೂಸಾ ಸಖಾಫಿ ಕಳತ್ತೂರು ಸ್ವಾಗತಿಸಿದರು. ಸಿ.ಎನ್ ವಂದಿಸಿದರು.



