ಮಂಜೇಶ್ವರ: ಕುಳೂರು ಚಿನಾಲದ ನವಯುವಕ ಕಲಾವೃಂದಮತ್ತು ಹಾಗೂ ಗ್ರಂಥಾ ಲಯ ಕೂಳೂರು ಚಿನಲ ಇದರ 60ನೆ. ವಾರ್ಷಿಕೋತ್ಸವ ಸಂಸ್ಥೆಯ ಪರಿಸರದಲ್ಲಿ ಭಾನುವಾರ ನಡೆಯಿತು. ಮೋನಪ್ಪ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಕೆ.ಯೋಗೀಶ ಕಲ್ಯಾಣತ್ತಾಯ ಉದ್ಘಾಟಿಸಿದರು. ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಿ.ಕಮಲಾಕ್ಷ. ಪ್ರಭಾಕರ ಶೆಟ್ಟಿ, ಮಿಂಜ ಗ್ರಾಮ ಪಂಚಾಯತಿ ಆರೋಗ್ಯ, ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಸ್ವತಿ, ಸದಸ್ಯರಾದ ಇ.ಜನಾರ್ದನ ಪೂಜಾರಿ, ಮೊಹಮ್ಮದ್ ಕುಂಞÂ ಚೀನಾಲ, ಬಸವರಾಜ್, ಲೋಕೇಶ್ ಚೀನಾಲ ಮೊದಲದವರು ಮಾತನಾಡಿದರು.
ಬಳಿಕ ಬಾಲವೇದಿ, ಮಹಿಳಾ ವಿಭಾಗದವರಿಂದ ವಿವಿಧ ರೀತಿಯ ನೃತ್ಯ ಹಾಗೂ ನಾಟಕ ಪ್ರದರ್ಶನ ನಡೆಯಿತು. ನಂತರ ಕ್ಲಬಿನ ಸದಸ್ಯರಿಂದ ಕಡೀರ ಮಗೆ ಎಂಬ ನಾಟಕ ಪ್ರದರ್ಶನ ನಡೆಯಿತು. ಅವಿನಾಶ್ ಸ್ವಾಗತಿಸಿ, ಉದಯ ಸಿ.ಎಚ್. ವರದಿ ಮಂಡಿಸಿದರು. ಸಂದೀಪ್ ವಂದಿಸಿದರು. ರವೀಂದ್ರ ಭಂಡಾರಿ ನಿರೂಪಿಸಿದರು.

.jpg)
