ಮಂಜೇಶ್ವರ: ಕೀರ್ತೇಶ್ವರ ಶ್ರೀ ಸದಾಶಿವ ದೇವರ ಹಾಗೂ ಪರಿವಾರ ದೇವರುಗಳಿಗೆ ದೃಢಕಲಶ ಕಾರ್ಯಕ್ರಮ ಜರುಗಿತು. ಬ್ರಹ್ಮ ಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿಗಳವರ ದಿವ್ಯ ಹಸ್ತದಿಂದ ಶ್ರೀ ಕೀರ್ತೇಶ್ವರ ಸದಾಶಿವ ದೇವರು ಹಾಗೂ ಪರಿವಾರ ದೇವರುಗಳಿಗೆ ದೃಢಕಲಶ ಕಾರ್ಯಕ್ರಮ ನೆರವೇರಿಸಲಾಯಿತು. ಈ ಸಂದರ್ಭ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರಮದಾನ ಮಾಡಿದ ಹಾಗೂ ತನು ಮನ ಧನಗಳಿಂದ ಸಹಕಾರ ನೀಡಿದ ಸರ್ವರಿಗೂ ಅಭಿನಂದಿಸುವ ಸಲುವಾಗಿ ಅಭಿನಂದನಾ ಕಾರ್ಯಕ್ರಮ ನಡೆಯಿತು.
ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ತುಕಾರಾಮ ಕುಂಬ್ಳೆ ಅಧ್ಯಕ್ಷತೆ ವಹಿಸಿದ್ದರು. ವಿಶ್ವನಾಥ ಪೆÇಯ್ಯೆಕಂಡ, ಕೆ.ಕೆ.ಶೆಟ್ಟಿ, ಮೋಹನ್ ಶೆಟ್ಟಿ ತೂಮಿನಾಡು, ದಯಾನಂದ ಬಂಗೇರ, ಭಾಸ್ಕರ್ ಎಡಪದವು, ಪ್ರದೀಪ್ ಅಂಜರೆ, ವಿಜಯಕುಮಾರ್ ಶಿವಪಾಲ್, ದಿನೇಶ್ ನಟ್ಟಿಬೈಲ್, ಶೈಲೇಶ್, ಕೀರ್ತೇಶ್, ರೇವತಿ ಶೈಲೇಶ್, ಶೈಲೇಶ್ ಅನುಗ್ರಹ ಮತ್ತು ದೇವಸ್ಥಾನದ ಪದಾಧಿಕಾರಿಗಳು, ಕೀರ್ತಿ ಕಲಾವೃಂದ ಮತ್ತು ಕೂಲ್ ಗೈಸ್ ಹಾಗೂ ಮಹಿಳಾ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹರೀಶ್ಚಂದ್ರ ಮಂಜೇಶ್ವರ ಸ್ವಾಗತಿಸಿದರು. ಉದಯಕುಮಾರ್ ಆನೆಬಾಗಿಲು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಅಖಿಲ ಕರ್ನಾಟಕ ಗಾಣಿಗ ಸಂಘದ ನಿರ್ದೇಶಕರಾದ ಭಾಸ್ಕರ್ ಎಡಪದವುರವರ ಸಂಪಾದಕೀಯದ ಸಫಲ ತ್ರೈಮಾಸಿಕ ಪತ್ರಿಕೆಯನ್ನು ಮೋಹನ್ ಶೆಟ್ಟಿ ತೂಮಿನಾಡು ಬಿಡುಗಡೆಗೊಳಿಸಿದರು.


