ಕಾಸರಗೋಡು: ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ, ಜಿಲ್ಲಾ ಮಹಿಳಾ ಸಂಘ ಮತ್ತು ಜಿಲ್ಲಾ ಯುವ ಸಂಘದ ನೇತೃತ್ವದಲ್ಲಿ 8 ನೇ ವರ್ಷದ ರಾಮನವಮಿ ಉತ್ಸವ ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಕಾರ್ಯಕ್ರಮದಂಗವಾಗಿ ವಿವಿಧ ಮಹಿಳಾ ಭಜನಾ ಮಂಡಳಿಗಳಿಂದ ಭಜನೆ ಮತ್ತು ಶ್ರೀ ರಾಮ ಕೀರ್ತನೆ, ಸಾಮೂಹಿಕ ರಾಮತಾರಕ ಮಂತ್ರ, ಮಹಾಪೂಜೆ, ಅನ್ನ ಸಂತರ್ಪಣೆ ಜರಗಿತು.

.jpg)
