ಕಾಸರಗೋಡು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಕೇಂದ್ರ ಕೇರಳ ವಿಶ್ವವಿದ್ಯಾನಿಲಯದಲ್ಲಿ ಉಪಕುಲಪತಿ(ವೈಸ್ ಚಾನ್ಸಲರ್) ಪ್ರೊ.ಸಿದ್ಧು ಪಿ.ಆಲ್ಗೂರ್ ಬಿ.ಆರ್.ಅಂಬೇಡ್ಕರ್ ಅವರ ಛಾಯಾಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಡಾ.ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲಿಸಬೇಕೆಂದು ಕರೆ ನೀಡಿದರು. ಬ್ರಿಟಿಷರು ಬಿಟ್ಟು ಹೋದ ಸಂದರ್ಭ ಸಂಕೀರ್ಣ ಸ್ಥಿತಿಯಲ್ಲಿದ್ದ ರಾಷ್ಟ್ರದ ಸಾರ್ವಭೌಮತೆಗೆ ಅಡಿಪಾಯ ಒದಗಿಸಲು ಸಂವಿಧಾನವೆಂಬ ಉದ್ಗ್ರಂಥವನ್ನು ನೀಡಿದ ಅವರ ಮಹಾನ್ ಕೊಡುಗೆ ಅಜರಾಮರ ಎಂದರು.
ಪ್ರೊ.ಕೆ.ಮುರುಗನ್ ಮುಖ್ಯ ಭಾಷಣ ಮಾಡಿದರು. ರಿಜಿಸ್ಟ್ರಾರ್ ಡಾ.ಎಂ.ಮುರಳೀಧರನ್ ನಂಬ್ಯಾರ್, ಪ್ರೊ.ರಾಜೇಂದ್ರನ್, ಪ್ರೊ.ತಾರು ಎಸ್.ಪವಾರ್, ಡಾ.ಬಿ.ಎಸ್.ಆಶಾ ಲಕ್ಷ್ಮಿ ಮಾತನಾಡಿದರು. ಎನ್‍ಎಸ್‍ಎಸ್ ಯೋಜನಾಧಿಕಾರಿ ಡಾ.ಎಸ್.ಅನ್‍ಬಳ್ಗಿ, ಡಾ.ಟಿ.ಕೆ.ಅನೀಶ್ ಕುಮಾರ್, ಡಾ.ಪಿ.ಸೆಂತಿಲ್ ಕುಮಾರನ್ ಉಪಸ್ಥಿತರಿದ್ದರು.

.jpg)
