ಬದಿಯಡ್ಕ: ಹಿರಿಯ ಯಕ್ಷಗಾನ ಕಲಾವಿದ ಕೀರ್ತಿಶೇಷ ಕುಂಬಳೆ ಶ್ರೀಧರ ರಾವ್ ಅವರ ನೆನಪಲ್ಲಿ ಶ್ರೀಮದ್ ಎಡನೀರು ಮಠದಲ್ಲಿ ಇಂದು ಸ್ಮರಣಾಂಜಲಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಅಪರಾಹ್ನ 2 ರಿಂದ ಶ್ರೀಧರ್ಮಸ್ಥಳ ಮೇಳದ ದಿ.ಶ್ರೀಧರ ರಾವ್ ಅವರ ಒಡನಾಡಿ ಕಲಾವಿದರಿಂದ ಚಕ್ರವ್ಯೂಹ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.
ಸಂಜೆ 5.30 ರಿಂದ ನಡೆಯಲಿರುವ ಸ್ಮರಣಾಂಜಲಿ ಸಭಾ ಕಾರ್ಯಕ್ರಮದಲ್ಲಿ ಪೂಜ್ಯ ಎಡನೀರು ಶ್ರೀಗಳು ಆಶೀರ್ವಚನ ನೀಡುವರು.ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಅಧ್ಯಕ್ಷತೆ ವಹಿಸುವರು. ಪುತ್ತೂರು ವಿವೇಕಾನಂದ ಪದವಿ ಕಾಲೇಜು ಆಡಳಿತ ಸಮಿತಿ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ ಅವರು ಕುಂಬಳೆ ಶ್ರೀಧರ ರಾವ್ ನೆನಪುಗಳನ್ನು ಹಂಚುವರು. ಹಿರಿಯ ಕಲಾವಿದ ಕೆ.ಎಚ್.ದಾಸಪ್ಪ ರೈ ಅವರಿಗೆ ಕುಂಬಳೆ ಸ್ಮøತಿ ಗೌರವ ಪ್ರದಾನ ಮಾಡಲಾಗುವುದು.
ಬಳಿಕ ದಮಯಂತಿ ಪುನಃ ಸ್ವಯಂವರ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ದಿ.ಶ್ರೀಧರ ರಾವ್ ಅವರ ಪತ್ನಿ ಕೆ.ಸುಲೋಚನಾ, ಪುತ್ರರಾದ ಗಣೇಶ್ ಪ್ರಸಾದ್, ಕೃಷ್ಣ ಪ್ರಸಾದ್ ಹಾಗೂ ದೇವಿ ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


