ಕುಂಬಳೆ: ಕಾಸರಗೋಡಿನ ಗಡಿನಾಡ ಸಾಂಸ್ಕøತಿಕ ಕಲಾ ವೇದಿಕೆಯ ನೇತೃತ್ವದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಕಾಸರಗೋಡು ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆಗಳಲ್ಲಿ ಗಾನಸುಧಾ ಭಕ್ತಿ ಸಂಗೀತ ಹಾಗೂ ಸಾಂಸ್ಕೃತಿಕ ಕಲಾ ವೈಭವ ನಡೆಯಲಿದೆ.
ಸೆ. 25 ರಂದು ಸಂಜೆ 4.ರಿಂದ ಮಂಗಳೂರು ದಸರಾ ಶ್ರೀ ಗೋಕರ್ಣಾಥೇಶ್ವರ ದೇವಸ್ಥಾನ ಕುದ್ರೋಳಿಯಲ್ಲಿ ಸಾಂಸ್ಕೃತಿಕ ಕಲಾ ವೈಭವ, ಸೆ. 26 ರಂದು ಮಧ್ಯಾಹ್ನ 1 ರಿಂದ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಮುಂಡಪ್ಪಳ್ಳದಲ್ಲಿ ಗಾನಸುಧಾ ಸಂಗೀತ ಭಕ್ತಿ ರಸಮಂಜರಿ, ಅದೇ ದಿನ ರಾತ್ರಿ 8 ರಿಂದ ಸಾಂಸ್ಕೃತಿಕ ಕಲಾ ವೈಭವ, ಸೆ. 27 ರಂದು ರಾತ್ರಿ 7.30 ರಿಂದ ಕಾರ್ಕಳದ ಬಜಗೋಳಿಯಲ್ಲಿ ಸಾಂಸ್ಕೃತಿಕ ಕಲಾ ವೈಭವ, ಸೆ. 28 ರಂದು ಮಧ್ಯಾಹ್ನ 1.30 ರಿಂದ ಶ್ರೀ ಮಹಿಷಮರ್ಧಿನಿ ದೇವಸ್ಥಾನ ಗೋಸಾಡದಲ್ಲಿ ಸಾಂಸ್ಕೃತಿಕ ಕಲಾ ವೈಭವ, ಸೆ. 29 ರಂದು ಸಂಜೆ 6.30 ರಿಂದ ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಗಾನಸುಧಾ ಸಂಗೀತ ಭಕ್ತಿ ರಸಮಂಜರಿ, ಸೆ. 30 ಪೂರ್ವಾಹ್ನ 11.30 ರಿಂದ ಕೂಟತ್ತಜೆ ಶ್ರೀ ಉಳ್ಳಾಳ್ತಿ ಅಮ್ಮನವರ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಲಾ ವೈಭವ, ಅ. 01 ಸಂಜೆ 6.30 ರಿಂದ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಲಾ ವೈಭವ, ಅ. 02 ರಂದು ಮಧ್ಯಾಹ್ನ 2 ರಿಂದ ಕೈರಂಗಳದ ಶ್ರೀ ಶಾರದೋತ್ಸವ ಸಮಿತಿಯ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಲಾ ವೈಭವ ನಡೆಯಲಿದೆ ಎಂದು ಸಂಘಟನೆಯ ಕಾರ್ಯದರ್ಶಿ ಗುರುರಾಜ್ ಕಾಸರಗೋಡು ತಿಳಿಸಿದ್ದಾರೆ.




