HEALTH TIPS

Bihar Elections: ಮಹಿಳಾ ಸ್ಪರ್ಧಿಗಳ ಸಂಖ್ಯೆ ಏರಿಕೆ

 ಬಿಹಾರ ವಿಧಾನಸಭೆಗೆ 2010, 2015 ಹಾಗೂ 2020ರಲ್ಲಿ ನಡೆದ ಚುನಾವಣೆಗಳಲ್ಲಿ ಮಹಿಳಾ ಸ್ಪರ್ಧಿಗಳ ಸಂಖ್ಯೆ ಕ್ರಮೇಣ ಹೆಚ್ಚಾಗಿದೆ. ಇದು ಸಬಲೀಕರಣ ಮತ್ತು ಲಿಂಗ ಸಮಾನತೆಗೆ ಇರುವ ಸವಾಲುಗಳನ್ನು ಮಹಿಳೆಯರು ಮೀರುತ್ತಿರುವುದನ್ನು ತೋರುತ್ತದೆ.

ಬಿಹಾರ ವಿಧಾನಸಭೆಯ ಕಳೆದ ಮೂರು ಚುನಾವಣೆಗಳ ಅಂಕಿ-ಅಂಶಗಳನ್ನು ವಿಶ್ಲೇಷಿಸಿದರೆ, ಮಹಿಳಾ ಹುರಿಯಾಳುಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗಿರುವುದು ಮತ್ತು ಯಶಸ್ಸಿನ ಪ್ರಮಾಣ ಏರುಪೇರಾಗಿರುವುದು ತಿಳಿಯುತ್ತದೆ. 


ಚುನಾವಣಾ ಕಣಕ್ಕಿಳಿದ ಮಹಿಳೆಯರ ಸಂಖ್ಯೆಯು, ಶಾಸಕಾಂಗ ಪ್ರಾತಿನಿಧ್ಯದಲ್ಲಿ ನಿಜವಾದ ಲಿಂಗ ಸಮಾನತೆ ಸಾಧಿಸುವ ನಿಟ್ಟಿನಲ್ಲಿ ರಾಜ್ಯವು ಎಷ್ಟು ದೂರ ಉಳಿದಿದೆ ಎಂಬುದನ್ನು ಸೂಚಿಸುತ್ತದೆ.

ಎಡಿಆರ್‌ ಮಾಹಿತಿ ಪ್ರಕಾರ, 2010ರ ಚುನಾವಣೆಯಲ್ಲಿ ಒಟ್ಟು 214 ಮಹಿಳೆಯರು ಕಣಕ್ಕಿಳಿದು, 32 ಮಂದಿ ಜಯ ಸಾಧಿಸಿದ್ದರು. ಅಂದರೆ, ಯಶಸ್ಸಿನ ಪ್ರಮಾಣ ಶೇ 15 ರಷ್ಟಿತ್ತು. ಗೆದ್ದವರಲ್ಲಿ ಹೆಚ್ಚಿನವರು ಜನತಾ ದಳ (ಯುನೈಟೆಡ್‌) ಹಾಗೂ ಬಿಜೆಪಿಗೆ ಸೇರಿದವರೇ ಆಗಿದ್ದರೂ, ಮಹಿಳೆಯರ ಪಾಲ್ಗೊಳ್ಳುವಿಕೆಯು ಭರವಸೆ ಮೂಡಸಿತ್ತು.

ಮೊದಲ ಸಲ ಕಣಕ್ಕಿಳಿದವರೊಟ್ಟಿಗೆ ಅನುಭವಿಗಳೂ ಕಣದಲ್ಲಿ ಇದ್ದದ್ದು, ಬಿಹಾರದ ರಾಜಕೀಯ ಮುಖ್ಯವಾಹಿನಿಯಲ್ಲಿ ಮಹಿಳೆಯರು ಅವಕಾಶಗಳನ್ನು ವಿಸ್ತರಿಸಿಕೊಳ್ಳುತ್ತಿರುವುದನ್ನು ತೋರುತ್ತದೆ ಎಂದು ಚುನಾವಣಾ ವೀಕ್ಷಕರು ಒತ್ತಿ ಹೇಳಿದ್ದರು.

ಬಿಹಾರ ವಿಧಾನಸಭಾ ಚುನಾವಣೆ: 71 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಬಿಜೆಪಿಃihಚಿಡಿ ಇಟeಛಿಣioಟಿs: 57 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಜೆಡಿ(ಯು)

ಐದು ವರ್ಷಗಳ ನಂತರ (2015ರಲ್ಲಿ), ಮಹಿಳಾ ಹರಿಯಾಳುಗಳ ಸಂಖ್ಯೆ ತುಸು ಹೆಚ್ಚಾಗಿ 272ಕ್ಕೆ ತಲುಪಿತ್ತು. ಆದರೆ, ಗೆದ್ದವರು 28 ಮಂದಿಯಷ್ಟೇ. ಯಶಸ್ಸಿನ ಪ್ರಮಾಣ ಶೇ 10ಕ್ಕೆ ಇಳಿದಿತ್ತು. ಈ ಕುಸಿತಕ್ಕೆ, ಕಣಗಳಲ್ಲಿನ ತೀವ್ರ ಸ್ಪರ್ಧೆ ಮತ್ತು ಸುರಕ್ಷಿತ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್‌ ನೀಡಲು ರಾಜಕೀಯ ಪಕ್ಷಗಳ ಹಿಂಜರಿಕೆಯೇ ಕಾರಣ. ಆದಾಗ್ಯೂ, ಚುನಾವಣೆ ವೇಳೆ ಪ್ರಚಾರ, ಚರ್ಚೆಗಳಲ್ಲಿ ಮಹಿಳೆಯರು ಹೆಚ್ಚಾಗಿ ಕಾಣಿಸಿಕೊಂಡದ್ದು, ರಾಜಕೀಯದಲ್ಲಿ ಭಾಗವಹಿಸುವಿಕೆಯ ಟ್ರಂಡ್‌ ಸುಧಾರಿಸುತ್ತಿರುವುದರ ಸೂಚನೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.

2020ರ ಚುನಾವಣೆಯಲ್ಲಿ 370 ಮಹಿಳೆಯರು ಕಣಕ್ಕಿಳಿದಿದ್ದರು. ಇದು, ಕಳೆದೆರಡು ದಶಕಗಳಲ್ಲೇ ಗರಿಷ್ಠ. ಆದಾಗ್ಯೂ 26 ಮಂದಿಯಷ್ಟೇ ಜಯ ಸಾಧಿಸಿದ್ದರು. ಯಶಸ್ಸಿನ ಪ್ರಮಾಣ ಶೇ 7ಕ್ಕೆ ಕುಸಿದಿತ್ತು. ಜಯದ ಪ್ರಮಾಣವು ಭಾರಿ ಕುಸಿತ ಕಂಡರೂ, ಸ್ಪರ್ಧಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿರುವುದು, ರಾಜಕೀಯ ಮಹತ್ವಾಕಾಂಕ್ಷೆ ಮತ್ತು ಮಹಿಳಾ ನಾಯಕತ್ವಕ್ಕೆ ಸಾಮಾಜಿಕ ಮನ್ನಣೆ ಸಿಗುತ್ತಿರುವುದನ್ನು ಋಜುವಾತು ಮಾಡಿದೆ.

243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಮಹಿಳೆಯರು ಶೇ 10.70 ರಷ್ಟು ಸ್ಥಾನ ಹೊಂದಿದ್ದಾರೆ. ಪ್ರಸ್ತುತ ವಿಧಾನಸಭೆ ಅವಧಿಯು ನವೆಂಬರ್‌ 22ರಂದು ಮುಕ್ತಾಯವಾಗಲಿದೆ.

243 ಕ್ಷೇತ್ರಗಳಿರುವ ಬಿಹಾರದಲ್ಲಿ ಎರಡು ಹಂತಗಳಲ್ಲಿ ಮತದಾನಕ್ಕೆ ದಿನಾಂಕ ನಿಗದಿಯಾಗಿದೆ. ಮೊದಲ ಹಂತದಲ್ಲಿ 121 ಕ್ಷೇತ್ರಗಳಿಗೆ ನವೆಂಬರ್‌ 6ರಂದು, ಎರಡನೇ ಹಂತದಲ್ಲಿ 122 ಕ್ಷೇತ್ರಗಳಿಗೆ ನವೆಂಬರ್‌ 11ರಂದು ಮತದಾನವಾಗಲಿದೆ. ನವೆಂಬರ್‌ 14ರಂದು ಫಲಿತಾಂಶ ಪ್ರಕಟವಾಗಲಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries