ಬದಿಯಡ್ಕ: ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯಸಂಕಲ್ಪದಂತೆ ಶಿಷ್ಯರ ಹಿತಕ್ಕಾಗಿ ಶ್ರೀ ಶಂಕರಾಚಾರ್ಯರ ಅವಿಚ್ಛಿನ್ನ ಪರಂಪರೆಯ 36 ಯತಿಗಳ ದಿವ್ಯಸಾನ್ನಿಧ್ಯವನ್ನೊಳಗೊಂಡ ಶಿಷ್ಯಹಿತಮ್ ಶ್ರೀ ಸ್ವರ್ಣಪಾದುಕೆಗಳ ಸವಾರಿಯು ಮುಳ್ಳೇರಿಯ ಹವ್ಯಕ ಮಂಡಲದ ನೀರ್ಚಾಲು ವಲಯಕ್ಕೆ ಭಾನುವಾರ ಸಂಜೆ ಆಗಮಿಸಿತು. ನೀರ್ಚಾಲು ವಲಯದ ಪರವಾಗಿ ಪದಾಧಿಕಾರಿಗಳು, ಗುರಿಕ್ಕಾರರು, ಮಾತೆಯರು, ಶಿಷ್ಯವೃಂದದವರು ಸ್ವಾಗತಿಸಿದರು. ವಲಯದ ವಿವಿಧ ಮನೆಗಳಿಗೆ ಭೇಟಿನೀಡಲಾಯಿತು. ಕನ್ನೆಪ್ಪಾಡಿ ಸಮೀಪದ ತಲ್ಪಣಾಜೆ ಸುಬ್ರಹ್ಮಣ್ಯ ಭಟ್ಟರ ಮನೆಯಲ್ಲಿ ಧೂಳೀ ಪೂಜೆ ನಡೆಯಿತು. ವಿವಿಧ ಘಟಕಗಳ ಗುರಿಕ್ಕಾರರುಗಳಿಂದ ಶಿಷ್ಯಮಾಹಿತಿ ಪುಸ್ತಕಗಳ ಸಮರ್ಪಣೆ, ಶಿಷ್ಯಹಿತಮ್ ಯೋಜನೆಯ ಕುರಿತು ಜ್ಯೋತಿಷಿ ನವನೀತ ಪ್ರಿಯ ಕೈಪಂಗಳ ಮಾಹಿತಿಯನ್ನು ನೀಡಿದರು. ಸೋಮವಾರ ಪಾದುಕಾ ಪೂಜೆ, ಭಿಕ್ಷಾಸೇವೆ ನಡೆಯಿತು. ನಂತರ ವಿವಿಧ ಮನೆಗಳಿಗೆ `Éೀಟಿನೀಡಿ ಪಳ್ಳತ್ತಡ್ಕ ವಲಯಕ್ಕೆ ಬೀಳ್ಕೊಡಲಾಯಿತು.

.jpg)
