ಮಂಜೇಶ್ವರ: ಮೀಂಜ ಗ್ರಾಮ ಪಂಚಾಯತಿ ಅಭಿವೃದ್ಧಿ ಸಮಾವೇಶವನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಉದ್ಘಾಟಿಸಿದರು. ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಸ್ವತಿ, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ರಾಧಾಕೃಷ್ಣ ಭಟ್, ಮೀಂಜ ಗ್ರಾಮ ಪಂಚಾಯತಿ ಸದಸ್ಯರಾದ ನಾರಾಯಣ ತುಂಗಾ, ಜ್ಯೋತಿ.ಪಿ ರೈ, ಕುಸುಮಾ ಮೋಹನ್, ಜನಾರ್ದನ ಪೂಜಾರಿ, ಬಿ.ಎಂ. ಆಶಾಲತಾ, ರೇಖಾ ಶರತ್, ಜಿ.ವಿನೋದ್, ವೈದ್ಯಾಧಿಕಾರಿಗಳಾದ ರಮ್ಯಾ ಭಾಸ್ಕರನ್, ಸಾರಿಕಾ ಎಸ್.ಪಿಳ್ಳೈ, ಕೃಷಿ ಅಧಿಕಾರಿ ಚಂಚಲಾ, ಮೀಂಜ ಪಿಇಸಿ ಕಾರ್ಯದರ್ಶಿ ಸುರೇಶ ಬಕ್ಕರ, ಶಾಲಾ ವ್ಯವಸ್ಥಾಪಕ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಆರ್.ಎಂ. ಶ್ರೀಧರ್ ರಾವ್, ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಶಾಲಿನಿ.ಬಿ. ಶೆಟ್ಟಿ ಮಾತನಾಡಿದರು. ಮೀಂಜ ಗ್ರಾಮ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಕೆ.ನಾರಾಯಣ ಸ್ವಾಗತಿಸಿದರು. ಮೀಂಜ ಗ್ರಾಮ ಪಂಚಾಯತಿ 2020-25ರ ಅಭಿವೃದ್ಧಿ ವರದಿಯನ್ನು ಈ ಸಂದರ್ಭ ಬಿಡುಗಡೆ ಮಾಡಲಾಯಿತು. ಅಭಿವೃದ್ಧಿ ಸಾಧನೆಗಳ ಛಾಯಾಚಿತ್ರ ಪ್ರದರ್ಶನ, ಕೆ ಸ್ಮಾರ್ಟ್ ಕ್ಲಿನಿಕ್ ಮತ್ತು ಹಸಿರು ಕ್ರಿಯಾಸೇನೆ ಸದಸ್ಯರಿಗೆ ಸೌಲಭ್ಯ ಕೇಂದ್ರಗಳು ಅಭಿವೃದ್ಧಿ ಸಭೆಯಲ್ಲಿ ಭಾಗವಹಿಸಿದ್ದರು.

.jpeg)
