ಕುಂಬಳೆ: ಧರ್ಮಸ್ಥಳ ಗೆಲ್ಗೆ ಡಾ. ಡಿ.ವೀರೇಂದ್ರ ಹೆಗ್ಗಡೆ ಬಾಳ್ಗೆ ಎಂಬ ಘೋಷಣೆಯೊಂದಿಗೆ ಕಾಸರಗೋಡಿನ ಹರಿಕೀರ್ತನ, ದಾಸ ಸಂಕೀರ್ತನಕಾರರಾದ ಭಜನಾ ಗುರು ಜಯಾನಂದ ಕುಮಾರ್ ಹೊಸದುರ್ಗ ಇವರಿಂದ 12 ಗಂಟೆಗಳ ಕಾಲ ನಿರಂತರ ಉದಯಾಸ್ತಮಾನ ಭಜನಾ ಸಂಕೀರ್ತನ ಗಾಯನ ಯಶಸ್ವಿಯಾಗಿ ಸಂಪನ್ನಗೊಂಡಿದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಸಂಸ್ಥಾಪಕ ಡಾ. ವೀರೇಂದ್ರ ಹೆಗ್ಗಡೆಯವರು ಆಭಿಪ್ರಾಯ ಪಟ್ಟರು.
ಜಯಾನಂದ ಕುಮಾರ್ ಅವರಿಗೆ ಮಂಜುನಾಥ ಸ್ವಾಮಿಯ ತೀರ್ಥ ನೀಡಿ ಗೌರವ ಪದಕ ಶಾಲು ಹಾರವನ್ನಿತ್ತು ಅಭಿನಂದನೆ ಸಲ್ಲಿಸಿದರು. ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡು ತಾಲೂಕು ಅಧ್ಯಕ್ಷರಾದ ಡಾಟ ಕೆ.ಎನ್.ವೆಂಕಟ್ರಮಣ ಹೊಳ್ಳ, ಕೇರಳ ರಾಜ್ಯ ದಾಸ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶಿವರಾಮ ಕಾಸರಗೋಡು ವಿಶ್ವಹಿಂದು ಪರಿಷತ್ ಕಾಸರಗೋಡು ಪ್ರಖಂಡ ಅಧ್ಯಕ್ಷರಾದ ಗುರುಪ್ರಸಾದ್ ಕೋಟೆಕಣಿ ಮಾಜಿ ಕಾಸರಗೋಡು ನಗರಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ ಕಲಾವಿದರಾದ ಮೋಹನ ಆಚಾರ್ಯ ಪುಳ್ಕೂರು, ಅಚ್ಚುತ್ತ ಆಚಾರ್ಯ ಕೂಡ್ಲು ಇವರಿಗೆ ವೀರೇಂದ್ರ ಹಗ್ಗಡೆಯವರು ಶಾಲು ಹೊದಿಸಿ ಗೌರವ ಪದಕವನ್ನಿತ್ತು ಸನ್ಮಾನಿಸಿದರು. ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡು ತಾಲೂಕು ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ತರಬೇತಿ, ಕಮ್ಮಟ, ಭಜನೋತ್ಸವ, ಜಿಲ್ಲೆಯ ಭಜನಾ ಮಂಡಳಿಗಳನ್ನು ಮತ್ತೆ ಸಕ್ರಿಯಗೊಳಿಸಿ ಕಾರ್ಯ ನಿರ್ವಹಿಸಲು ಉದ್ದೇಶಿಸಲಾಗಿದೆ ಎಂದು ಪರಿಷತ್ ಕಾಸರಗೋಡು ತಾಲೂಕು ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಅವರು ಡಾ. ವೀರೇಂದ್ರ ಹೆಗ್ಗಡೆಯವರಲ್ಲಿ ಪ್ರಸ್ತಾವನೆಗೈದು ಅನುಗ್ರಹ ಪಡೆದರು. ಕಾಸರಗೋಡು ಪ್ರದೇಶದ ನೂರಾರು ಭಜಕರು ಸಕ್ರೀಯವಾಗಿ ಪಾಲ್ಗೊಂಡರು. ಡಾ. ಕೆ.ಎನ್.ವೆಂಕಟ್ರಮಣ ಹೊಳ್ಳ ಇವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ್ದರು.

.jpg)

