ಮಂಜೇಶ್ವರ: ಮೀಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ 47ನೇ ವರ್ಷದ ಅಯ್ಯಪ್ಪ ದೀಪೋತ್ಸವ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಡಿ.26ರ ಶುಕ್ರವಾರ ಜರಗಲಿದೆ.
ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ, ಸಂಜೆ ತಾಲಪ್ಪೊಲಿ ಹೊರಡುವುದು, ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಮೆರವಣಿಗೆ, ದೀಪಾರಾಧನೆ, ತಾಯಂಬಕ ಮತ್ತು ಅಗ್ನಿಪೂಜೆ, ಅಗ್ನಿಪ್ರವೇಶ, ಪ್ರಸಾದ ವಿತರಣೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಊರ ಪ್ರತಿಭೆಗಳಿಂದ ನೃತ್ಯ ವೈವಿಧ್ಯ, ಉಡಲೇ ಮೋಕೆದ ಕಡಲ್ ತುಳು ನಾಟಕ ನಡೆಯಲಿದೆ.

