ಪೆರ್ಲ: ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಡಿ.26 ರಿಂದ ಜ.1ರ ವರೆಗೆ ಬದಿಯಡ್ಕ ನವಜೀವನ ಹೈಯರ್ ಸೆಕೆಂಡರಿ ಶಾಲಾ ಎನ್ನೆಸ್ಸೆಸ್ ಘಟಕದ ವಾರ್ಷಿಕ ಶಿಬಿರ ನಡೆಯಲಿದ್ದು, ಇದನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸ್ವಾಗತ ಸಮಿತಿ ರಚನೆ ಸಭೆ ಪೆರ್ಲ ಶಾಲೆಯ ಗ್ರಂಥಾಲಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಶಾಲಾ ರಕ್ಷಕ ಶಿಕ್ಷಕ ಸಂಘ ಅಧ್ಯಕ್ಷ ಪುರುಷೋತ್ತಮ ಬಿ.ಎಂ. ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಶಾಲೆಯ ಪ್ರಾಂಶುಪಾಲ ಮಾಧವನ್ ಭಟ್ಟತ್ತಿರಿಪ್ಪಾಡ್ ಮಾತನಾಡಿ, ಏಳು ದಿನಗಳ ಶಿಬಿರದ ರೂಪುರೇಷೆಗಳ ಬಗ್ಗೆ ತಿಳಿಸಿದರು. ಎಣ್ಮಕಜೆ ಗ್ರಾಪಂ ಸದಸ್ಯರಾಗಿ ಚುನಾಯಿತರಾದ ಅಶ್ವಿನಿ ಕೆ.ಎಂ, ಹಮೀದ್ ಕೆಡೆಂಜಿ, ಎಣ್ಮಕಜೆ ಗ್ರಾಪಂ ಸದಸ್ಯೆಯಾಗಿ ಚುನಾಯಿತರಾದ ವಿಜಯ ಕೆ.ಸಿ., ಶಿಕ್ಷಕರಾದ ಶ್ರೀನಾಥ್, ರಾಜೀವ್ ಮತ್ತಿತರು ಉಪಸ್ಥಿತರಿದ್ದರು.
ಪೆರಡಾಲ ಮತ್ತು ಪೆರ್ಲ ಶಾಲಾ ಆಡಳಿತ ಸಮಿತಿ ಪದಾಧಿಕಾರಿಗಳನ್ನು ಮುಖ್ಯ ರಕ್ಷಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಎಣ್ಮಕಜೆ ಗ್ರಾ.ಪಂ. ಸದಸ್ಯೆಯಾಗಿ ಚುನಾಯಿತರಾದ ಆಯಿಷಾ ಎ.ಎ., ಉಪಾಧ್ಯಕ್ಷರಾಗಿ ಬದಿಯಡ್ಕ ಗ್ರಾ.ಪಂ. ಸದಸ್ಯರಾಗಿ ಚುನಾಯಿತರಾದ ಅಶ್ವಿನಿ ಕೆ.ಎಂ., ಕಾರ್ಯಾಧ್ಯಕ್ಷರಾಗಿ ಪುರುಷೋತ್ತಮ ಬಿ.ಎಂ., ಜನರಲ್ ಕನ್ವೀರ್ ಆಗಿ ಮಾಧವನ್ ಭಟತ್ತಿರಿಪ್ಪಾಡ್ ಆಯ್ಕೆಯಾದರು.

