ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಏಪ್ರಿಲ್ 17 ರಿಂದ 28 ರ ತನಕ ನಡೆಯಲಿದ್ದು ಬ್ರಹ್ಮಕಲಶೋತ್ಸವ ಆಮಂತ್ರಣಕ್ಕಾಗಿ ಮಹಾ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಉದ್ಯಮಿ ನಿತ್ಯಾನಂದ ಶೆಣೈ ಬದಿಯಡ್ಕ ಕಾರ್ಯಕರ್ತರಿಗೆ ಆಮಂತ್ರಣ ಪತ್ರಿಕೆಯ ಕಿಟ್ ವಿತರಿಸಿ ಉದ್ಘಾಟಿಸಿದರು. 5 ಮಂದಿಯಂತೆ ಒಟ್ಟು 30 ರಷ್ಟು ತಂಡಗಳು ಪಾಲ್ಗೊಂಡು ಬದಿಯಡ್ಕ ಪಂಚಾಯತಿ ವ್ಯಾಪ್ತಿ ಹಾಗೂ ಸುತ್ತುಮುತ್ತಿನ ವಿವಿಧ ಪ್ರದೇಶದ ಮನೆಮನೆಗಳಿಗೆ ಆಮಂತ್ರಣ ನೀಡಿದರು. ಈ ಮೂಲಕ ಸುಮಾರು 400ಕ್ಕೂ ಮಿಕ್ಕಿ ಮನೆಗಳನ್ನು ಸಂಪರ್ಕಿಸಲಾಯಿತು. ಆರ್ಥಿಕ ಸಂಗ್ರಹವೂ ನಡೆಯಿತು. ಊರ ಮಹನೀಯರು, ಮಹಿಳೆಯರು, ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಮಹಾ ಅಭಿಯಾನ ಯಶಸ್ವಿಯಾಯಿತು. ಪ್ರತೀ ಭಾನುವಾರ ಈ ಕಾರ್ಯವು ನಡೆಯಲಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಕಾರ್ಯಕರ್ತರು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಿಕೊಳ್ಳಲು ಕರೆನೀಡಲಾಯಿತು.

.jpg)
