ಬದಿಯಡ್ಕ: ಸ್ಮಾರಕ ಕಲಾ ಸೇವಾ ಪ್ರತಿಷ್ಠಾನ ನೀರ್ಚಾಲು ಇದರ 23ನೇ ವರ್ಷದ ಸಂಸ್ಮರಣಾ ಸಮಾರಂಭ ಇಂದು(ಡಿ.25)ಅಪರಾಹ್ನ 2 ರಿಂದ ನೀರ್ಚಾಲು ಶ್ರೀ ಕುಮಾರಸ್ವಾಮಿ ಸಭಾ ಭವನದಲ್ಲಿ ನಡೆಯಲಿದೆ.
ವಿಹಿಂಪ ಧರ್ಮಪ್ರಸಾರ ಪ್ರಮುಖ್ ವಾಮನ ಆಚಾರ್ಯ ಬೋವಿಕ್ಕಾನ ಅಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ ಯಕ್ಷಗಾನ ಕಲಾವಿದ ಉದಯ ಶಂಕರ ಭಟ್ ಮಜಲು ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಬಳಿಕ ವಿಘ್ನೇಶ್ವರ ಯಕ್ಷಗಾನ ಕಲಾಸಂಘ ನಾಯ್ಕಾಪು ತಂಡದವರಿಂದ ಕಾರ್ತವೀರ್ಯಾರ್ಜುನ ಆಖ್ಯಾಯಿಕೆಯ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

