ಪೆರ್ಲ: ಶ್ರೀದುರ್ಗಾಪರಮೇಶ್ವರಿ ಭಜನಾ ಸಮಿತಿ ಮೊಗೇರು ಇದರ 22ನೇ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀದುರ್ಗಾನಮಸ್ಕಾರ ಪೂಜೆ ನಾಳೆ(ಡಿ.26) ಅಡ್ಕಸ್ಥಳ ಸಮೀಪದ ಮೊಗೇರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಡಿ.26 ರಂದು ಬೆಳಿಗ್ಗೆ 6.30ಕ್ಕೆ ದೇವತಾ ಪ್ರಾರ್ಥನೆ, 6.51ಕ್ಕೆ ಮೊಗೇರು ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ರಾಮಚಂದ್ರ ನಾಯಕ್ ಅವರಿಂದ ದೀಪ ಪ್ರಜ್ವಲನೆ, ಭಜನಾ ಆರಂಭ, ಬಳಿಕ ವಿವಿಧ ಭಜನಾ ತಂಡಗಳಿಂದ ಸಂಜೆ 7ರ ವರೆಗೆ ಭಜನೆ ನಡೆಯಲಿದೆ. ಬಳಿಕ ಶ್ರೀದುರ್ಗಾನಮಸ್ಕಾರ ಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಡಿ.27 ರಂದು ಬೆಳಿಗ್ಗೆ 6ರ ಬಳಿಕ ಶ್ರೀದೇವಿಗೆ ಸೀಯಾಳ ಅಭಿಷೇಕ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

