ಕಾಸರಗೋಡು: ಬೇಕಲ್ ಬೀಚ್ ಫೆಸ್ಟ್ ಕಾರ್ಯಕ್ರಮಗಳ ನಡುವೆ ಜನರ ನೂಕುನುಗ್ಗಾಟದಿಂದ ಹಲವರು ಗಾಯಗೊಳ್ಳುವುದರ ಜತೆಗೆ, ಪೆÇಯಿನಾಚಿ ನಿವಾಸಿ ಯುವಕ ರೈಲು ಡಿಕ್ಕಿಯಾಗಿ ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ಬೀಚ್ ಫೆಸ್ಟ್ ಆಯೋಜಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕ್ರಿಸ್‍ಮಸ್ ರಜಾ ಕಾಲಾವಧಿ ಹಿನ್ನೆಲೆಯಲ್ಲಿ ಬೇಕಲ್ ಬೀಚ್ ಫೆಸ್ಟಿನಲ್ಲಿ ಭಾರೀ ಜನ ಸಂದಣಿಯಿರುತ್ತಿದ್ದು, ಜನದಟ್ಟಣೆ ನಿಯಂತ್ರಿಸಲು ಜಿಲ್ಲಾಡಳಿತ ಸಾಕಷ್ಟು ಮುನ್ನೆಚ್ಚರಿಕೆ ವಹಿಸದಿರುವುದು ಖಂಡನೀಯ ಹಾಗೂ ಇದು ಗಂಭೀರ ಕರ್ತವ್ಯ ಲೋಪವಾಗಿದೆ.
ಒಂದು ತಿಂಗಳ ಹಿಂದೆಯಷ್ಟೆ ಕಾಸರಗೋಡು ನಗರದಲ್ಲಿ ಗಾಯಕ ಹನಾನ್ ಶಾ ಕಾರ್ಯಕ್ರಮದ ಸಂದರ್ಭದಲ್ಲೂ ನೂಕುನುಗ್ಗಾಟ ನಡೆದು ಅವಾಂತರ ಸೃಷ್ಟಿಯಾಗಿತ್ತು. ಇಲ್ಲೂ ಮುನ್ನೆಚ್ಚರಿಕೆ ವಹಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿತ್ತು. ಜಿಲ್ಲಾಡಳಿತ ಹಾಗೂ ಕಾರ್ಯಕ್ರಮ ಆಯೋಜಕರ ವೈಫಲ್ಯ ಬೇಕಲ್ ಫೇಸ್ಟ್‍ನಲ್ಲಿ ಮತ್ತೊಮ್ಮೆ ಸಾಬೀತಾಗಿದೆ ಎಂದು ಅಶ್ವಿನಿ ಆರೋಪಿಸಿದರು.


