ಕಾಸರಗೋಡು: ಕೇರಳ ಮುಸ್ಲಿಂ ಜಮಾಅತ್ ವತಿಯಿಂದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಕೇರಳ ಯಾತ್ರೆಯು ಜನವರಿ 1 ರಂದು ಕಾಸರಗೋಡಿನಿಂದ ಆರಂಭವಾಗಲಿದೆ. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಸೆಂಟಿನರಿಯ ಅಂಗವಾಗಿ ಹಮ್ಮಿಕೊಂಡಿರುವ ಕೇರಳ ಯಾತ್ರೆ ಕೇರಳ ಮುಸ್ಲಿಂ ಜಮಾಅತ್ ಅಧ್ಯಕ್ಷ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ನೇತೃತ್ವ ವಹಿಸಲಿದ್ದಾರೆ ಎಂದುಕೇರಳ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಕಾರ್ಯದರ್ಶಿ ಎನ್. ಅಲಿ ಅಬ್ದುಲ್ಲಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಯ್ಯಿದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ಮತ್ತು ಪೇರೋಡ್ ಅಬ್ದುರಹಮಾನ್ ಸಖಾಫಿ ಅವರು ಉಪನಾಯಕರಾಗಿರುವರು. ಉಪ ಸಂಘಟನೆಗಳ ಗಣ್ಯ ಸಾರಥಿಗಳು ಯಾತ್ರೆಯಲ್ಲಿ ಭಾಗವಹಿಸುವರು. 'ಜನರೊಂದಿಗೆ' ಎಂಬುದು ಈ ಬಾರಿಯ ಯಾತ್ರೆಯ ಮುಖ್ಯ ಘೋಷಣೆಯಾಗಿದೆ. ಜನವರಿ 1ರಂದು ಮಧ್ಯಾಹ್ನ 1.30ಕ್ಕೆ ಉಳ್ಳಾಲ ದರ್ಗಾ ಝಿಯಾರತ್‍ನೊಂದಿಗೆ ಯಾತ್ರೆಗೆ ಚಾಲನೆ ನೀಡಲಾಗುವುದು. ಸಮಸ್ತ ಅಧ್ಯಕ್ಷ ಇ. ಸುಲೈಮಾನ್ ಮುಸ್ಲಿಯಾರ್ ಮತ್ತು ಉಪಾಧ್ಯಕ್ಷ ಸಯ್ಯದ್ ಕೆ.ಎಸ್. ಆಟಕ್ಕೋಯ ತಂಙಳ್ ಕುಂಬೋಲ್ ಅವರು ಕಾಂತಪುರಂ ಉಸ್ತಾದ್ ಅವರಿಗೆ ಸಂಘಟನೆಯ ಧ್ವಜವನ್ನು ಹಸ್ತಾಂತರಿಸುವರು.
ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು ಉಳ್ಳಾಲದಲ್ಲಿ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷ, ಮಾಣಿ ಉಸ್ತಾದ್ ಅಧ್ಯಕ್ಷತೆ ವಹಿಸುವರು. ದರ್ಗಾ ಪ್ರೆಸಿಡೆಂಟ್ ಹನೀಫ್ ಹಾಜಿ ಸೇರಿದಂತೆ ಹಲವಾರು ಮಂದಿ ಗಣ್ಯರು ಪಾಲ್ಗೊಳ್ಳುವರು.
ಸಂಜೆ 4ಕ್ಕೆ ಕಾಸರಗೋಡಿನ ಚೆರ್ಕಳದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಸಮಸ್ತ ಅಧ್ಯಕ್ಷ ರಯೀಸುಲ್ ಉಲಮಾ ಇ ಸುಲೈಮಾನ್ ಉಸ್ತಾದ್ ಅವರ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷರಾದ ಕೆಎಸ್ ಆಟ್ಟಕ್ಕೋಯ ತಂಙಳ್ ಕುಂಬೋಲ್ ಉದ್ಘಾಟಿಸುವರು. ಚಿನ್ಮಯ ಮಿಷನ್ ಕೇರಳ ಘಟಕದ ಅಧ್ಯಕ್ಷ ಶ್ರೀ ಸ್ವಾಮಿ ವಿವೇಕಾನಂದ ಸರಸ್ವತಿ, ಫಾದರ್ ಮ್ಯಾಥ್ಯೂ ಬೇಬಿ ಮಾರ್ತೋಮಂ, ಸಚಿವರಾದ ಕಡನ್ನಪ್ಪಳ್ಳಿ ರಾಮಚಂದ್ರನ್, ಕರ್ನಾಟಕ ಸ್ಪೀಕರ್ ಯುಟಿ ಖಾದರ್, ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಕಾಸರಗೋಡು ಜಿಲ್ಲೆಯ ಶಾಸಕರು ಪಾಲ್ಗೊಳ್ಳುವರು. ಜ. 16ರಂದು ಸಂಜೆ 5ಕ್ಕೆ ತಿರುವನಂತಪುರದ ಪುತ್ಥರಿಕ್ಕಂಡ ಮೈದಾನದಲ್ಲಿ ಯಾತ್ರೆ ಸಮಾರೋಪಗೊಳ್ಳಲಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಯಲ್ಲಿ ಜಮಾಅತ್ ಸಮಿತಿ ಪದಾಧಿಕಾರಿಗಳಾದ ಸಯ್ಯದ್ ಹಸನುಲ್ ಅಹ್ದಲ್ ತಂಙಳ್, ಬಿ.ಎಸ್. ಅಬ್ದುಲ್ಲಕುಞÂ ಫೈಝಿ, ಪಳ್ಳಂಗೋಡ್ ಅಬ್ದುಲ್ ಖಾದಿರ್ ಮದನಿ, ಅಬ್ದುಲ್ ಹಕೀಂ ಹಾಜಿ ಕಳನಾಡ್, ಕೊಲ್ಲಂಬಾಡಿ ಅಬ್ದುಲ್ ಖಾದಿರ್ ಸಅದಿ ಉಪಸ್ಥೀತರಿದ್ದರು.


