ಬದಿಯಡ್ಕ: ಮಾನ್ಯ ಶ್ರೀ ಅಯ್ಯಪ್ಪ ಮಂದಿರದಲ್ಲಿ ನಮೋ ಬ್ರಿಗೇಡ್ ಮಾನ್ಯ ವತಿಯಿಂದ ವಿಶೇಷ ಭಜನಾ ಸೇವೆ ಸೋಮವಾರ ಸಂಜೆ ಜರಗಿತು. ಈ ಸಂದರ್ಭದಲ್ಲಿ ಕಳೆದ ವರ್ಷ ಶ್ರೀಮಂದಿರದಿಂದ ಬೆಳ್ಳಿಯ ಛಾಯಾಚಿತ್ರ ಹಾಗೂ ಇನ್ನಿತರ ಪೂಜಾಸಾಮಗ್ರಿಗಳ ಕಳವು ಪ್ರಕರಣವನ್ನು ಬೇಧಿಸಿ ಬೆಳ್ಳಿಯನ್ನು ಮರಳಿ ಪಡೆದುಕೊಳ್ಳುವಲ್ಲಿ ಯಶಸ್ಸನ್ನು ಸಾಧಿಸಿದ ತನಿಖಾಧಿಕಾರಿಗಳಿಗೆ ಅಭಿನಂದನೆಯನ್ನು ಸಲ್ಲಿಸಲಾಯಿತು.
ಬದಿಯಡ್ಕ ಪೊಲೀಸ್ ಠಾಣೆಯ ತನಿಖಾಕಾಧಿರಿಗಳಾದ ಸಹಾಯಕ ಪೊಲೀಸ್ ಅಧಿಕಾರಿ ಪ್ರಸಾದ್ ಬಿ.ಕೆ. ಹಾಗೂ ಮೊಹಮ್ಮದ್ ಆರಿಫ್ ಅವರನ್ನು ನಮೋ ಬ್ರಿಗೇಡ್ ತಂಡದ ಪರವಾಗಿ ಮಂದಿರದ ಕುಂಞಪ್ಪ ಗುರುಸ್ವಾಮಿ ಹಾಗೂ ರಾಮ ಗುರುಸ್ವಾಮಿ ಶಾಲು ಹೊದೆಸಿ ಶ್ರೀದೇವರ ಪ್ರಸಾದವನ್ನು ನೀಡಿ ಗೌರವಿಸಿದರು. ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ಕುಂಞÂಕಣ್ಣ ಗುರುಸ್ವಾಮಿ ಉಪಸ್ಥಿತರಿದ್ದರು. ಭಗವದ್ಭಕ್ತರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮವು ಜನಮೆಚ್ಚುಗೆಗೆ ಪಾತ್ರವಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಡಿ. ಶಂಕರ, ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಜಿಲ್ಲಾ ಪಂಚಾಯಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಬ್ಲಾಕ್ ಪಂಚಾಯಿತಿ ಸದಸ್ಯ ಮಹೇಶ್ ವಳಕ್ಕುಂಜ, ಗ್ರಾಮಪಂಚಾಯಿತಿ ಸದಸ್ಯರುಗಳಾದ ಅವಿನಾಶ್ ರೈ ಬದಿಯಡ್ಕ, ರಜನಿ ಸಂದೀಪ್, ಬಿಂದ್ಯಾ ಕಾರ್ತಿಕ್, ಹರೀಶ ಮಜಿರ್ಪಳ್ಳಕಟ್ಟೆ ಅವರನ್ನು ಶ್ರೀ ಅಯ್ಯಪ್ಪ ಮಂದಿರದ ಸೇವಾಸಮಿತಿಯ ಪರವಾಗಿ ಅಧ್ಯಕ್ಷ ನಾರಾಯಣ ಮಣಿಯಾಣಿ ಶಾಲು ಹೊದೆಸಿ ಅಭಿನಂದಿಸಿದರು. ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ, ನಮೋ ಬ್ರಿಗೇಡ್ ಸದಸ್ಯರು ಉಪಸ್ಥಿತರಿದ್ದರು. ಹಿರಿಯರಾದ ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು.

.jpg)
