ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷನಾಗಿ ಅಧಿಕಾರವನ್ನು ಸ್ವೀಕರಿಸಿದ ಡಿ.ಶಂಕರ ಅವರಿಗೆ ಬದಿಯಡ್ಕದ ಧೀರಾಸ್ ಕಾರ್ಯಕರ್ತರ ತಂಡವು ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿಯನ್ನು ಸಲ್ಲಿಸಿದರು.
ಬೋಳುಕಟ್ಟೆ ಕ್ರೀಡಾಂಗಣ, ಸ್ಟೇಡಿಯಂ ನಿರ್ಮಾಣ, ಬದಿಯಡ್ಕ ಪೇಟೆಯಲ್ಲಿ ಬಸ್ಸು ತಂಗುದಾಣ ನಿರ್ಮಾಣ ಮೊದಲಾದ ಬೇಡಿಕೆಗಳನ್ನು ಪರಿಶೀಲಿಸಿದ ಅಧ್ಯಕ್ಷರು ಮುಂದಿನ ದಿನಗಳಲ್ಲಿ ಮನವಿಯನ್ನು ಪರಿಗಣಿಸಲಾಗುವುದು ಎಂಬ ಭರವಸೆಯನ್ನು ನೀಡಿದರು.

.jpg)
