ಕಾಸರಗೋಡು: ವೆಳ್ಳರಿಕುಂಡು ಸನಿಹದ ಕರಾಕುಂಡಿ ಎಂಬಲ್ಲಿ ಕಾಡುಹಂದಿ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಪಲ್ಟಿಯಾಗಿ, ಇಬ್ಬರು ಸವಾರರು ಗಾಯಗೊಂಡಿದ್ದಾರೆ. ವೆಳ್ಳರಿಕುಂಡು ವೆಳ್ಳಾಲಿ ನಿವಾಸಿಗಳಾದ ಸೆಬಾಸ್ಟಿಯನ್ ಮತ್ತು ಕಿಳಂಗರ ನಿವಾಸಿ ಚೆರಿನ್ ಗಾಯಾಳುಗಳು. ಇವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರಿಬ್ಬರೂ ಭೀಮನಡಿಯಲ್ಲಿ ನಡೆದ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬುಧವಾರ ರಾತ್ರಿ 10ರ ವೇಳೆಗೆ ಸ್ಕೂಟರಲ್ಲಿ ವಾಪಸಾಗುವ ಮಧ್ಯೆ ಅಪಘಾತ ಸಂಭವಿಸಿದೆ.

