ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಎಂಜಿನಿಯರಿಂಗ್ ಸೇವಾ ಪರೀಕ್ಷೆ (ಇಎಸ್‌ಇ) 2025ರ ಫಲಿತಾಂಶವನ್ನು ಗುರುವಾರ ಪ್ರಕಟಿಸಿದ್ದು, 458 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಸಿವಿಲ್ ಎಂಜಿನಿಯರಿಂಗ್ ಅಡಿಯಲ್ಲಿ ಅತ್ಯಧಿಕ ಅಂದರೆ 202 ಅಭ್ಯರ್ಥಿಗಳು, ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್‌ನಲ್ಲಿ 116, ಎಲೆಕ್ಟ್ರಿಕಲ್‌ನಲ್ಲಿ 79 ಮತ್ತು ಮೆಕ್ಯಾನಿಕಲ್‌ನಲ್ಲಿ 61 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.
ಆಗಸ್ಟ್‌ನಲ್ಲಿ ಲಿಖಿತ ಪರೀಕ್ಷೆ, ಅಕ್ಟೋಬರ್-ನವೆಂಬರ್‌ನಲ್ಲಿ ವ್ಯಕಿತ್ವ ಪರೀಕ್ಷೆ ನಡೆಸಲಾಗಿತ್ತು. ಆಯೋಗದ ವೆಬ್‌ಸೈಟ್‌ನಲ್ಲಿ (www.upsc.gov.in) ಫಲಿತಾಂಶ ಲಭ್ಯವಿದೆ.

