ಕಾಸರಗೋಡು: ನೀಲೇಶ್ವರ ನಗರಸಭೆಯ ಅಧ್ಯಕ್ಷರಾಗಿ ಪಿ.ಪಿ. ಮುಹಮ್ಮದ್ ರಫಿ ಆಯ್ಕೆಯಾಗಿದ್ದಾರೆ. ಕಣಿಚಿರಾ ವಾರ್ಡ್ನಿಂದ ಮುಹಮ್ಮದ್ ರಫಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು.
ಪಿ.ಎಂ. ಸಂಧ್ಯಾ ಉಪಾಧ್ಯಕ್ಷರಾಗಿದ್ದಾರೆ. ಚುನಾವಣಾಧಿಕಾರಿ ಡಿ.ಎಲ್. ಸುಮಾ ಅಧ್ಯಕ್ಷ ಪಿ.ಪಿ. ಮುಹಮ್ಮದ್ ರಫಿ ಅವರಿಗೆ ಪ್ರಮಾಣವಚನ ಬೋಧಿಸಿದರು. ಅಧ್ಯಕ್ಷ ಪಿ.ಪಿ. ಮುಹಮ್ಮದ್ ರಫಿ ಉಪಾಧ್ಯಕ್ಷ ಪಿ.ಎಂ. ಸಂಧ್ಯಾ ಅವರಿಗೆ ಪ್ರಮಾಣವಚನ ಬೋಧಿಸಿದರು.


