ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಾಸರಗೋಡು, ಬದಿಯಡ್ಕ ವಲಯದ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ನೀರ್ಚಾಲು, ಕನ್ನೆಪ್ಪಾಡಿ, ಕಡಂಬಳ, ಮಾನ್ಯ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ನೀರ್ಚಾಲು ಇದರ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಸ್ಕೂಲಿನಲ್ಲಿ ಇತ್ತೀಚೆಗೆ ನಡೆಯಿತು. ಶಾಲಾ ಪ್ರಬಂಧಕ ಜಯದೇವ ಖಂಡಿಗೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕರಾವಳಿ ಪ್ರಾದೇಶಿಕ ಕಚೇರಿ ಜನಜಾಗೃತಿ ವಿಭಾಗದ ಯೋಜನಾಧಿಕಾರಿ ಗಣೇಶ್ ಆಚಾರ್ಯ ಧಾರ್ಮಿಕ ಉಪನ್ಯಾಸ ನೀಡಿ, ನಾವು ಮಾಡಿದ ಪುಣ್ಯದ ಕೆಲಸ ನಮ್ಮನ್ನು ಕಾಪಾಡುತ್ತದೆ, ಹಾಗೂ ಯೋಜನೆಯು ಜನಪರವಾದ ಕೆಲಸಗಳನ್ನು ಮಾಡುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಯೋಜನೆಯ ಬಗ್ಗೆ ಅಪ ಪ್ರಚಾರಗಳನ್ನು ಕೆಲವು ದುಷ್ಟಶಕ್ತಿಗಳು ಮಾಡುತ್ತಿದ್ದು ಇವುಗಳ ಸತ್ಯಾಸತ್ಯತೆಯನ್ನು ತಿಳಿಯಬೇಕು ಎಂದರು. ತಾಲೂಕು ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಅಖಿಲೇಶ್ ನಗುಮುಗಂ ಮಾತನಾಡಿ, ಮದ್ಯಪಾನಕ್ಕೆ ಬಲಿಯಾದ ವ್ಯಸನಿಗಳನ್ನು ಶಿಬಿರಕ್ಕೆ ಸೇರ್ಪಡೆ ಮಾಡಿ ಸಮಾಜದಲ್ಲಿ ಮಾದರಿ ಜೀವನ ನಡೆಸಲು ದಾರಿ ತೋರಿಸಿದ ಏಕೈಕ ಸಂಸ್ಥೆ ಧರ್ಮಸ್ಥಳ ಯೋಜನೆಯಾಗಿದೆ ಎಂದು ತಿಳಿಸಿದರು.
ಸಮಿತಿಯ ಅಧ್ಯಕ್ಷ ಉದಯ ಕುಮಾರ್ ಓ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ದಿನೇಶ್ ಬಿ, ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದ ಟ್ರಸ್ಟಿ ಸುಂದರ ಶೆಟ್ಟಿ ಕೊಲ್ಲಂಗಾನ ಉಪಸ್ಥಿತರಿದ್ದರು. ಯೋಜನೆಯಿಂದ ಮಂಜೂರಾದ ಸುಜ್ಞಾನ ನಿಧಿ ಶಿಷ್ಯ ವೇತನದ ಮಂಜೂರಾತಿ ಹಾಗೂ ಕ್ರಿಟಿಕಲ್ ಇಲ್‍ನೆಸ್ ಫಂಡ್ ಮಂಜೂರಾತಿ ಪತ್ರವನ್ನು ಫಲಾನುಭವಿಗೆ ವಿತರಿಸಲಾಯಿತು. ಒಕ್ಕೂಟಗಳ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ ಸತ್ಯನಾರಾಯಣ ಪೂಜೆಯ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಸೇವಾಪ್ರತಿನಿಧಿ ಬೇಬಿ ಸ್ವಾಗತಿಸಿ, ನಳಿನಾಕ್ಷಿ ವಂದಿಸಿದರು. ಜ್ಯೋತಿ ವರದಿ ವಾಚಿಸಿದರು. ಮೇಲ್ವಿಚಾರಕಿ ಸುಗುಣ ಓ ಹವಾಲ್ದಾರ್ ಕಾರ್ಯಕ್ರಮ ನಿರ್ವಹಿಸಿದರು. ಸಮಿತಿ ಪದಾಧಿಕಾರಿಗಳು ಸುನಿಲ್, ಅನ್ನಪೂರ್ಣೇಶ್ವರಿ, ಚಿತ್ರ, ಶಿವಾನಿ ಓ, ಶಶಿಕಲಾ ಓ, ಮಮತಾ, ವಲಯದ ಸೇವಾಪ್ರತಿನಿಧಿಗಳಾದ ಅನಿತಾ, ಜಲಜಾಕ್ಷಿ, ಸುನೀತಾ, ಪ್ರಪುಲ್ಲ ಉಪಸ್ಥಿತರಿದ್ದರು. ಒಕ್ಕೂಟದ ಸದಸ್ಯರಿಂದ ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು.

.jpg)
.jpg)
