ಕಾಸರಗೋಡು: ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಷನ್(ಎಕೆಪಿಎ) ಕಾಸರಗೋಡು ವೆಸ್ಟ್ ಯುನಿಟ್ ವತಿಯಿಂದ ಕೂಡ್ಲು ನಿವಾಸಿ ಬಡಕುಟುಂಬದ ಕಮಲ ಎಂಬವರಿಗೆ ಮಧುಮೇಹ ತಪಾಸಣಾ ಮೆಡಿಕಲ್ ಕಿಟ್‍ನ್ನು ಅವರ ನಿವಾಸದಲ್ಲಿ ಹಸ್ತಮತರಿಸಲಾಯಿತು.ª
ಮಧೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಾನುಪ್ರಕಾಶ್ ಅವರು ತಪಾಸಣಾ ಕಿಟ್ ಕಮಲಾ ಅವರಿಗೆ ಹಸ್ತಾಂತರಿಸಿದರು. ಎಕೆಪಿಎ ವೆಸ್ಟ್ ಯೂನಿಟ್ ಅಧ್ಯಕ್ಷ ವಸಂತ ಕೆರಮನೆ, ಜಿಲ್ಲಾ ಸಮಿತಿ ಸದಸ್ಯ ಹಿರಿಯ ಛಾಯಾಗ್ರಾಹಕ ಮೈಂದಪ್ಪ ವಲಯ ಸಮಿತಿ ಉಪಾಧ್ಯಕ್ಷ ಸುಬ್ರಹ್ಮಣ್ಯ ವಿಡಿಯೋನಿಕ್ಸ್, ಯೂನಿಟ್ ನಿರೀಕ್ಷಕ ಅಜಿತ್ ಸಿಗ್ನೇಚರ್, ಹಿರಿಯ ಛಾಯಾಗ್ರಾಹಕ ಮುರಳಿ ಎಲ್ಲೋರ ಉಪಸ್ಥಿತರಿದ್ದರು. ಯೂನಿಟ್ ಕಾರ್ಯದರ್ಶಿ ಶಾಲಿನಿ ರಾಜೇಂದ್ರನ್ ಸ್ವಾಗತಿಸಿದರು. ವಲಯ ಜತೆ ಕಾರ್ಯದರ್ಶಿ ಗಣೇಶ್ ರೈ ವಂದಿಸಿದರು.


