ಕಾಸರಗೋಡು: ನಗರದ ಕರಂದಕ್ಕಾಡು ಬಿಲ್ಲವ ಸೇವಾ ಸಂಘ(ರಿ )ದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ 20 ನೇ ಪ್ರತಿಷ್ಠಾ ವಾರ್ಷಿಕೋತ್ಸವ, ಸನ್ಮಾನ ಸಮಾರಂಭ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಬೆಳಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ, ಗುರುಪೂಜೆ ಹಾಗೂ ಕುತ್ಯಾಳ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಭಜನಾ ವೃಂದ, ಮತ್ತು ಶ್ರೀ ಮಹಾಲಿಂಗೇಶ್ವರ ಭಜನಾ ಸಂಘ ವತಿಯಿಂದ ಭಜನೆ ನಡೆಯಿತು. ಪುತ್ತೂರಿನ ಅಕ್ಷಯ ಗ್ರೂಪ್ ಓಫ್ ಎಜುಕೇಷನಲ್ ಇನ್‍ಸ್ಟಿಟ್ಯೂಟ್‍ನ ಅಧ್ಯಕ್ಷ ಜಯಂತ ನಡುಬೈಲ್ ಸಮಾರರಂಭ ಉದ್ಘಾಟಿಸಿ ಮಾತನಾಡಿ, ಸಮಾಜದ ಯುವ ಪೀಳಿಗೆ ಶ್ರೀ ನಾರಾಯಣ ಗುರುಗಳ ತತ್ವ ಹಾಗೂ ಸಿದ್ಧಾಂತ ಮೈಗೂಡಿಸಿಕೊಳ್ಳುವುದರ ಜತೆಗೆ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.ಸಂಘದ ಅಧ್ಯಕ್ಷ ರಘು ಮೀಪುಗುರಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಉದ್ಯಮಿ ಹರೀಶ್ ಕುಮಾರ್, ಟೌನ್ ಜಿ ಯು ಪಿ ಶಾಲಾ ಮುಖ್ಯಶಿಕ್ಷಕಿ ಭಾರತಿ, ಅಡ್ಕತ್ತಬೈಲ್ ಶಾಲಾ ಮುಖ್ಯ ಶಿಕ್ಷಕಿ ಸೀಮಾ, ಕಾಸರಗೋಡು ನಗರ ಸಭಾ ಸದಸ್ಯರಾದ ರವೀಂದ್ರ ಕರಂದಕ್ಕಾಡ್, ಹರೀಶ್ ಕೆ ಆರ್, ಕೊರಕ್ಕೋಡು ಶ್ರೀ ದೂಮಾವತಿ ದೈವಸ್ಥಾನದ ಪ್ರದಾನ ಕರ್ಮಿ ವಸಂತ ಪೂಜಾರಿ ಅವರನ್ನು ಗೌರವಿಸಲಾಯಿತು.
ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘದ ಕೋಶಾಧಿಕಾರಿ ಜನಾರ್ದನ ಪೂಜಾರಿ, ನಿವೃತ್ತ ಶಿಕ್ಷಕ ಕೃಷ್ಣಪ್ಪ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶೀನಪ್ಪ ಪೂಜಾರಿ ಅಲಾರ್, ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದ ಆಡಳಿತ ಮೊಕ್ತೆಸರ ಅಚ್ಚುತ, ಬಿಲ್ಲವ ಸೇವಾ ಸಂಘದ ಗೌರವಧ್ಯಕ್ಷ ಎ ಕೇಶವ ಉಪಸ್ಥಿತರಿದ್ದರು. ಸಂಘದ ಸಮಿತಿ ಸದಸ್ಯರಾದ ಸುಕಿರ್ತಿ ವರ್ಮಾ, ಅಶೋಕ್ ಬೀರಂತಬೈಲ್, ಕಮಲಾಕ್ಷ ಸೂರ್ಲು, ಸಂತೋಷ್, ಮೈಂದಪ್ಪ ಪೂಜಾರಿ, ಸತೀಶ್ ಗುಡ್ಡೆಮನೆ, ಮಹೇಶ್, ಚಂದ್ರಕಲಾ, ರೋಹಿಣಿ, ದೀಪ್ತಿ, ರವಿ ಪೂಜಾರಿ ಉಪಸ್ಥಿತರಿದ್ದರು. ಪ್ರದಾನ ಕಾರ್ಯದರ್ಶಿ ಹರಿಕಾಂತ ಕಾಸರಗೋಡು ಸ್ವಾಗತಿಸಿದರು. ಪ್ರೇಮ್‍ಜಿತ್ ಹಾಗೂ ಜ್ಞಾನಲತಾ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕೋಶಧಿಕಾರಿ ಶಮ್ಮಿಕುಮಾರ್ ವಂದಿಸಿದರು. ನಂತರ ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರಗಿತು.


