ಕಾಸರಗೋಡು: ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಮೊಗ್ರಾಲ್ ಪುತ್ತೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸೋಮವಾರ ಆರಂಭಗೊಂಡಿತು.
ಶಾಲಾ ಕಲೋತ್ಸವ ಡಿ. 31ರ ವರೆಗೆ ಜರುಗಲಿದ್ದು, ಕಾರ್ಯಕ್ರಮವನ್ನು ಹಸಿರು ಸಂಹಿತೆಯೊಂದಿಗೆ ನಡೆಸಲಾಗುತ್ತಿದೆ. ಕುಂಬಳೆಯಿಂದ ಆರಂಭಗೊಂಡ ಡಂಗುರ ಜಾಥಾ ಕಲೋತ್ಸವ ವೇದಿಕೆ ವರೆಗೆ ನಡೆಯಿತು. ಒಟ್ಟು 238ಸ್ಪರ್ಧೆಗಳು ನಡೆಯಲಿದ್ದು, 3953ಮಂದಿ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ 1128ಮಂದಿ ವಿದ್ಯಾರ್ಥಿಗಳು, ಪ್ರೌಢಶಾಲಾ ವಿಭಾಗದಲ್ಲಿ 1404ಮಂದಿ, ಹೈಯರ್ ಸಎಕೆಂಡರಿ ಶಾಲಾ ವಿಭಾಗದಲ್ಲಿ 1421ಮಂದಿ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಯಕ್ಷಗಾನ ಸ್ಪರ್ಧೆಗಳು ಡಿ. 31ರಂದು ನಡೆಯಲಿದೆ.
ಮೂರು ದಿವಸಗಳ ಕಾಲ ನಡೆಯಲಿರುವ ಜಿಲ್ಲಾ ಶಾಲಾ ಕಲೋತ್ಸವ ವೇದಿಕೆಗಳಗೆ ಗರಿಷ್ಠ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಲೋತ್ಸವ ನಡೆಯುವ 12ವೇದಿಕೆಗಳಲ್ಲಿ ನೂರರಷ್ಟು ಪೊಲೀಸರನ್ನುನಿಯೋಜಿಸಲಾಗಿದೆ. ಕುಂಬಳೆ ಠಾಣೆ ಇನ್ಸ್‍ಪೆಕ್ಟರ್ ಟಿ.ಕೆ ಮುಕುಂದನ್ ಹಾಗೂ ಸೈಬರ್ ಸೆಲ್‍ನ ಐ.ಪಿ ಜಿಜೇಶ್ ನೇತೃತ್ವದ ಪೊಲೀಸರ ಮೇಲ್ನೋಟದಲ್ಲಿ ಭದ್ರತೆ ಏರ್ಪಡಿಸಲಾಗಿದೆ. ವಾಹನಗಳ ಪಾರ್ಕಿಂಗ್, ಸಂಚಾರ ನಿಯಂತ್ರಣದಲ್ಲೂ ಪೊಲೀಸರು ಸಹಕರಿಸುತ್ತಿದ್ದಾರೆ.

