ಬದಿಯಡ್ಕ: ದೇಶದ ಅಭಿವೃದ್ಧಿಗಾಗಿ ತನ್ನ ಜೀವನವನ್ನೇ ಸಮರ್ಪಿಸಿದ ಮಹೋನ್ನತ ನಾಯಕ ಅಟಲ್‍ಜೀ ಅವರ ಜನ್ಮದಿನವನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಸಮಾಜಮುಖೀ ಕಾರ್ಯವನ್ನು ಹಮ್ಮಿಕೊಂಡಿರುವ ನಮೋ ಬ್ರಿಗೇಡ್ ತಂಡದ ಕಾರ್ಯ ಶ್ಲಾಘನೀಯ. ಅಟಲ್‍ಜೀ ಅವರ ಹೆಸರಿನಲ್ಲಿ ನಡೆಯುವ ಸೇವಾಕಾರ್ಯ ನಿರಂತರವಾಗಲಿ ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ, ಧಾರ್ಮಿಕ ಮುಂದಾಳು ರವೀಶ ತಂತ್ರಿ ಕುಂಟಾರು ಹೇಳಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಚಾರಣೆಯ ಪ್ರಯುಕ್ತ ನಮೋ ಬ್ರಿಗೇಡ್ ಮಾನ್ಯ ನೇತೃತ್ವದಲ್ಲಿ ಮಾನ್ಯ ಜ್ಞಾನೋದಯ ಹಿರಿಯ ಬುನಾದಿ ಶಾಲೆಯ ಆವರಣದಲ್ಲಿ ಪೆಡಗೋಗಿಕಲ್ ಪಾರ್ಕ್ ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನ್ಯ ಜ್ಞಾನೋದಯ ಹಿರಿಯ ಬುನಾದಿ ಶಾಲೆಯ ವ್ಯವಸ್ಥಾಪಕ ನಿತ್ಯಾನಂದ ಆರ್ ಮಾನ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಸುರೇಂದ್ರನ್ ಮಾಸ್ತರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಿಜಯಕುಮಾರ್ ಮಾನ್ಯ, ಸಂಘದ ಹಿರಿಯ ಕಾರ್ಯಕರ್ತ ಗೋಪಾಲಕೃಷ್ಣ ಭಟ್ ಏವುಂಜೆ, ನಿತ್ಯಾನಂದ ಫಾರ್ಮ್‍ನ ಎಂ.ವಿ.ರವಿಶಂಕರ್ ಮಾನ್ಯ, ನಿವೃತ್ತ ಸೈನಿಕರುಗಳಾದ ಶ್ರೀನಿವಾಸ ನಾಯ್ಕ ಉಳ್ಳೋಡಿ ಹಾಗೂ ಡಿ.ಕೃಷ್ಣ ನಾಯ್ಕ ದೇವರಕೆರೆ, ಬಿಜೆಪಿ ಪಶ್ಚಿಮ ವಲಯ ಕಾರ್ಯದರ್ಶಿ ಬಾಲಗೋಪಾಲ ಏಣಿಯರ್ಪು ಉಪಸ್ಥಿತರಿದ್ದರು. ಬಿಜೆಪಿ ಪಶ್ಚಿಮ ವಲಯ ಅಧ್ಯಕ್ಷ ಮಹೇಶ್ ವಳಕ್ಕುಂಜ ಸ್ವಾಗತಿಸಿ, ಉಪಾಧ್ಯಕ್ಷ ಮಧುಚಂದ್ರ ಮಾನ್ಯ ವಂದಿಸಿದರು. ನಮೋ ಬ್ರಿಗೇಡ್ ಸಂಚಾಲಕ ಸಂತೋಷ್ ಕುಮಾರ್ ಮಾನ್ಯ ನಿರೂಪಿಸಿದರು. ಕಾರ್ಯಕರ್ತರು ರಾತ್ರಿ ತನಕ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿ ಶಾಲೆಯ ಪಾರ್ಕ್‍ನ್ನು ಉಪಯೋಗಪ್ರದವಾಗಿಸಿದರು.

.jpg)
