ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ, ತೂಮಿನಾಡು ಇದರ ಆಶ್ರಯದಲ್ಲಿ ಸಹೃದಯ ಕುಲಾಲ ಬಂಧುಗಳ/ದಾನಿಗಳ ಸಹಕಾರದಿಂದ ರೂಪು ಗೊಂಡ " ಕುಲಾಲ ಸಮಾಜದ ನೊಂದ ಜೀವಕ್ಕೊಂದು ಆಸರೆ" ಸಮಾಜ ಕಾರ್ಯದ 13ನೇ ಕುಲಾಲ ಆಸರೆ ಸಹಾಯ ಹಸ್ತ ಯೋಜನೆಯನ್ನು ಕುಲಾಲ ಸಂಘ ಬದಿಯಡ್ಕ ಶಾಖೆಯ ಕನ್ನೆಪ್ಪಾಡಿ ಮಾಡತ್ತಡ್ಕ ನಿವಾಸಿ ದಿ. ದೇವಕಿ ಕುಲಾಲ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ತರ್ ಕಬ್ಬಿನಹಿತ್ಲು, ಸಂಘಟನಾ ಸಂಚಾಲಕ ಸುಧೀರ್ ರಂಜನ್ ದೈಗೋಳಿ, ಕುಲಾಲ ಸಂಘ ಬದಿಯಡ್ಕ ಶಾಖೆಯ ಕಾರ್ಯಕಾರಿ ಸಮಿತಿ ಸದಸ್ಯ ಸದಾಶಿವ ಮಾಸ್ತರ್ ಬೇಳ ಉಪಸ್ಥಿತರಿದ್ದರು.

.jpg)
